೧೨ ನೇ ಶತಮಾನದಲ್ಲಿ ತಮ್ಮ ವಚನಗಳ ಮೂಲಕ ಜಾತಿಧರ್ಮಗಳ ಮೂಲಕ ಸಿಡಿದೆದ್ದು ಎಲ್ಲರೂ ಸಮಾನರು ಎಂದು ಸಾರಿದ ದೇವರ ದಾಸಿಮಯ್ಯನವರು ಸಾಮಾಜಿಕ ಕ್ರಾಂತಿಗೆ ಬುನಾದಿ ಹಾಕಿದರು ಎಂದು ನಿವೃತ್ತ ಶಿಕ್ಷಕ ತ.ಶಿ.ಬಸವಮೂರ್ತಿ ಅವರು ಹೇಳಿದರು.
ಹುಳಿಯಾರಿನ ಶ್ರೀಬನಶಂಕರಿ ದೇವಾಲಯದಲ್ಲಿ ನಡೆದ ದೇವರ ದಾಸಿಮಯ್ಯ ಜಯಂತಿಯಲ್ಲಿ ನಿವೃತ್ತ ಶಿಕ್ಷಕ ಹಾಗೂ ಸಾಹಿತಿ ತ.ಶಿ.ಬಸವಮೂರ್ತಿ ಮಾತನಾಡಿದರು. |
ಹುಳಿಯಾರಿನ ಶ್ರೀಬನಶಂಕರಿ ದೇವಾಲಯದಲ್ಲಿ ದೇವಾಂಗ ಮಂಡಳಿ ಹಾಗೂ ದೇವರ ದಾಸಿಮಯ್ಯ ನೇಕಾರ ಅಭಿವೃದ್ದಿ ಸೇವಾ ಟ್ರಸ್ಟ್ ವತಿಯಿಂದ ಬುಧವಾರ ಬೆಳಿಗ್ಗೆ ದೇವರ ದಾಸಿಮಯ್ಯ ಜಯಂತಿ ಆಚರಿಸಲಾಯಿತು. |
ಪಟ್ಟಣದ ಶ್ರೀಬನಶಂಕರಿ ದೇವಾಲಯದಲ್ಲಿ ಬನಶಂಕರಿ ಛಾರಿಟಬಲ್ ಟ್ರಸ್ಟ್ , ದೇವಾಂಗ ಮಂಡಳಿ ಹಾಗೂ ದೇವರ ದಾಸಿಮಯ್ಯ ನೇಕಾರ ಅಭಿವೃದ್ದಿ ಸೇವಾ ಟ್ರಸ್ಟ್ ವತಿಯಿಂದ ಬುಧವಾರ ಬೆಳಿಗ್ಗೆ ದೇವರ ದಾಸಿಮಯ್ಯ ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿದರು.
ಬಟ್ಟೆ ನೇಯುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದ ದಾಸಿಮಯ್ಯನವರ ಜನ್ಮ ಸ್ಥಳ ಯಾದಗಿರಿ ಜಿಲ್ಲೆಯ ಮುದನೂರು ಗ್ರಾಮವಾಗಿದ್ದು ದುಗ್ಗಳೆ ಆತನ ಪತ್ನಿ.ಇವರ ವಚನಗಳ ಅಂಕಿತ ರಾಮನಾಥ ಎಂದಾಗಿದ್ದು ಈವರೆಗೂ ಇವರು ೧೫೦ಕ್ಕೂ ಹೆಚ್ಚು ವಚನಗಳು ದೊರೆತಿವೆ ಎಂದು ದಾಸಿಮಯ್ಯನ ಪರಿಚಯ ಮಾಡಿಕೊಟ್ಟರು. ದಾಸಿಮಯ್ಯನ ವಚನಗಳಲ್ಲಿನ ಚಿಂತನೆಗಳನ್ನು ಹಾಗೂ ತೀವ್ರವಾದ ಅನುಭಾವವನ್ನು ಜೀವನದಲ್ಲಿ ಅನುಷ್ಠಾನಗೊಳಿಸಿಕೊಳ್ಳುವ ಮೂಲಕ ಹಿರಿಯ ಹಾದಿಯಲ್ಲಿ ಸಾಗೋಣ ಎಂದರು.
ಕಸಾಪದ ಹೆಚ್.ಕೆ.ರಾಮಯ್ಯ ಮಾತನಾಡಿ ೧೨ ನೇ ಶತಮಾನ ಸಾಹಿತ್ಯದ ಕ್ರಾಂತಿಕಾರಕ ಹಾಗೂ ಪರಿವರ್ತನೆಯ ಸಂದಿಕಾಲವಾಗಿದ್ದು ಇಂತಹ ಸಮಯದಲ್ಲಿ ಮೂಡಿಬಂದಿದ್ದೆ ವಚನಗಳು. ವಚನಗಳು ಆತ್ಮಸಾಕ್ಷಿಯಾಗಿ ಹೊರಬಂದ ಮಾತುಗಳಾಗಿದ್ದು ಇಂತಹ ವಚನಕಾರರಲ್ಲಿ ಪ್ರಪ್ರಥಮರಾಗಿದ್ದವರು ದಾಸಿಮಯ್ಯ ಎಂದರು. ಸಮಾಜ ತಿದ್ದುವ ಸಲುವಾಗಿ ಇವರ ನಿಲುವುಗಳು ಕಠೋರವಾಗಿದ್ದು, ವೃತ್ತಿಯಿಂದ ನೇಕಾರರಾಗಿದ್ದ ಇವರನ್ನು ಜೇಡರ ದಾಸಿಮಯ್ಯ ಎಂತಲೂ ಜೀವನದಲ್ಲಿ ಸಾಧಿಸಿದ ಸಾಕ್ಷಾತ್ಕಾರ ಕಂಡುಕೇಳಿ ಗೌರವಿಸಿ ದೇವರದಾಸಿಮಯ್ಯ ಎಂತಲೂ ಕರೆಯಲಾಯಿತು ಎಂದರು. ಇವರು ದೇವಾಂಗ ಸಮುದಾಯಕ್ಕೆ ಮಾತ್ರ ಮೀಸಲಾಗದೆ ಸರ್ವಸಮುದಾಯಕ್ಕೂ ಅನ್ವಯಿಸುವ ಋಷಿಗಳಾಗಿದ್ದು ಇವರ ತತ್ವವನ್ನು ಎಲ್ಲರೂ ಅಳವಡಿಸಿಕೊಂಡು ಆಚರಿಸಿ ಎಂದು ಕರೆ ನೀಡಿದರು.
ದೇವಾಂಗಮಂಡಳಿ ಅಧ್ಯಕ್ಷ ಅನಂತ್ ಕುಮಾರ್ ಮಾತನಾಡಿ ಸಮುದಾಯದವರ ಹೋರಾಟದ ಫಲವಾಗಿ ಇಂದು ದಾಸಿಮಯ್ಯ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಮುಂದಾಗಿರುವುದು ಸ್ವಾಗತಾರ್ಹ. ಸಮುದಾಯದವರು ಇದನ್ನು ಒಂದು ದಿವಸಕ್ಕೆ ಮಾತ್ರ ಸೀಮಿತಗೊಳಿಸದೆ ನಿತ್ಯಜೀವನದಲ್ಲಿ ಅವರ ವಚನಸಾರ ಅಳವಡಿಸಿಕೊಳ್ಳಿ ಎಂದರು.
ಬನಶಂಕರಿ ಛಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಅಧ್ಯಕ್ಷ ಬಿ.ಟಿ.ರಾಜ್ ಗೋಪಾಲ್, ದೇವಾಂಗ ಸಮುದಾಯದ ದಾಸಪ್ಪ, ಶಂಕರಪ್ಪ, ಬಳೆಕುಮಾರ್,ಕೇಶವ್ ಸೇರಿದಂತೆ ದೇವಾಂಗ ಸಮುದಾಯದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ