ಹುಳಿಯಾರು : ಹೋಬಳಿ ಕಾರೇಹಳ್ಳಿಯ ಶ್ರೀರಂಗನಾಥಸ್ವಾಮಿಯ ಜಾತ್ರಾಮಹೋತ್ಸವದ ಅಂಗವಾಗಿ (ತಾ.೭) ಶನಿವಾರ ರಾತ್ರಿ ೮ಕ್ಕೆ ಸ್ವಾಮಿಯ ಚಂದ್ರಮಂಡಲೋತ್ಸವ ನಡೆಯಲಿದೆ.
ಕಳೆದ ಆರು ದಿನಗಳಿಂದ ಜಾತ್ರಾಮಹೋತ್ಸವ ನಡೆಯುತ್ತಿದ್ದು ಪ್ರತಿ ನಿತ್ಯ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯ ಹಾಗೂ ಪ್ರತಿ ನಿತ್ಯ ಸಂಜೆ ಸ್ವಾಮಿಯನ್ನು ವಿವಿಧ ಮಂಟಪದಲ್ಲಿ ಕುಳ್ಳಿರಿಸಿ ಶಯನೋತ್ಸವ, ಸರ್ಪವಾಹನೋತ್ಸವ ಹಾಗೂ ಅಡ್ಡಪಲ್ಲಕ್ಕಿ ಉತ್ಸವ ಕಾರ್ಯ ನಡೆಸಲಾಗುತ್ತಿದೆ. ತಾ.೧೦ರ ಮಂಗಳವಾರದವರೆಗೆ ಜಾತ್ರಾ ಕಾರ್ಯ ನಡೆಯಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ