ಹುಳಿಯಾರು ಪಟ್ಟಣದ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಗುರುವಾರದಂದು ಶಿಕ್ಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಸೇರಿ ಹೋಳಿ ಹಬ್ಬ ಆಚರಿಸಿದರು.
ಹುಳಿಯಾರಿನ ವಿದ್ಯಾವಾರಿಧಿ ಶಾಲೆಯಲ್ಲಿ ಹೋಳಿ ಆಚರಣೆ ಅಂಗವಾಗಿ ವಿದ್ಯಾರ್ಥಿಗಳು ವಿವಿಧ ಹಾಡು- ನೃತ್ಯ ಗಳಿಗೆ ಹೆಜ್ಜೆ ಹಾಕಿದರು. |
ಹೋಳಿ ಆಚರಣೆ ಅಂಗವಾಗಿ ವಿದ್ಯಾರ್ಥಿಗಳು ಬಗೆಬಗೆಯ ಹಾಡು-ನೃತ್ಯ ಅಭಿನಯಿಸಿದರಲ್ಲದೆ ಒಬ್ಬರಿಗೊಬ್ಬರು ಬಣ್ಣ ಹಚ್ಚುವ ಮೂಲಕ ಸಂಭ್ರಮಿಸಿದರು. ವಿದ್ಯಾರ್ಥಿಗಳಾದ ಸಾಹಿತ್ಯ,ಕುಬ್ರಾ ಹೋಳಿ ಆಚರಣೆಯ ಬಗ್ಗೆ ಮಾತನಾಡಿದರು. ಈ ವೇಳೆ ಶಾಲಾ ಕಾರ್ಯದರ್ಶಿ ಕವಿತಾ ಕಿರಣ್ ಕುಮಾರ್, ಪ್ರಾಂಶುಪಾಲ ರವಿ, ಶಾಲಾ ಶಿಕ್ಷಕರು ,ಸಿಬ್ಬಂದಿಯವರು ಪಾಲ್ಗೊಂಡಿದ್ದು ಶಾಲಾ ಮಕ್ಕಳು ಪರಸ್ಪರ ಬಣ್ಣಗಳೆರಚುತ್ತಾ ಸಂಭ್ರಮಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ