ಬ್ರಿಟಿಷರ ದಾಸ್ಯದಿಂದ ಭಾರತವನ್ನು ಮುಕ್ತಗೊಳಿಸಿ ಸ್ವಾತಂತ್ರ ದೇಶವನ್ನಾಗಿ ಕಟ್ಟುವಲ್ಲಿ ಅನೇಕ ಮಹಾನ್ ವ್ಯಕ್ತಿಗಳು ಶ್ರಮಿಸಿದ್ದು ಅಂತಹ ವ್ಯಕ್ತಿಗಳಲ್ಲಿ ಕ್ರಾಂತಿಕಾರಿಯಾಗಿ ಗುರುತಿಸಿಕೊಂಡಿದ್ದ ಭಗತ್ ಸಿಂಗ್ ಸಹ ಒಬ್ಬರಾಗಿದ್ದು ಅವರು ಆದರ್ಶಗಳು ಇಂದಿನ ಯುವಪೀಳಿಗೆಗೆ ಮಾದರಿಯಾಗಿವೆ ಎಂದು ನಿವೃತ್ತ ಶಿಕ್ಷಕ ಹು.ಲ.ವೆಂಕಟೇಶ್ ತಿಳಿಸಿದರು.
ಹುಳಿಯಾರಿನ ಕಿಯೋನಿಕ್ಸ್ ಯುವ ಡಾಟ್ ಕಾಮ್ ಕಂಪ್ಯೂಟರ್ ಕೇಂದ್ರದಲ್ಲಿ ಭಗತ್ ಸಿಂಗ್ ಅವರ ಸ್ಮರಣಾ ಕಾರ್ಯಕ್ರಮ ನಡೆಸಲಾಯಿತು. |
ಹುಳಿಯಾರಿನ ಕಿಯೋನಿಕ್ಸ್ ಯುವ ಡಾಟ್ ಕಾಮ್ ಕಂಪ್ಯೂಟರ್ ಕೇಂದ್ರದಲ್ಲಿ ಅಯೋಜಿಸಿದ್ದ ಭಗತ್ ಸಿಂಗ್ ಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಗತ್ ಸಿಂಗ್ ಅಹಿಂಸಾವಾದಿಯಾಗಿದ್ದು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಅವರು ಕ್ರಾಂತಿಯ ಮಾರ್ಗ ಹಿಡಿದರೂ ಸಹ ಹಿಂಸೆ ಮಾಡಲಿಲ್ಲ. ತಾನೂ ಅಹಿಂಸಾ ಮಾರ್ಗದಿಂದಲೇ ಬ್ರಿಟಿಷರ ವಿರುದ್ದ ಹೋರಾಡುವೆ ಎಂಬ ಛಲಹೊಂದಿದ್ದ ಮಹಾನ್ ವ್ಯಕ್ತಿಯಾಗಿದ್ದರು ಎಂದರು.
ಎಬಿವಿಪಿ ಮುಖಂಡ ಹಾಗೂ ಉಪನ್ಯಾಸಕ ನರೇಂದ್ರಬಾಬು ಮಾತನಾಡಿ ಸ್ವಾತಂತ್ರ್ಯ ಹೋರಾಟದಲ್ಲಿ ಭಗತ್ ಸಿಂಗ್ ಅವರು ತಮ್ಮದೇ ಆದ ಛಾಪು ಮೂಡಿಸಿದ್ದು ಅವರ ಬಗ್ಗೆ ರಚಿತವಾಗಿರುವ ಲೇಖನಗಳನ್ನು ಓದುವಾಗ ಮೈರೋಮಾಂಚನವಾಗುತ್ತದೆ ಎಂದರು. ಭಗತ್ ಸಿಂಗ್ ದಕ್ಷ ಹಗೂ ಪ್ರಾಮಾಣಿಕ ವ್ಯಕ್ತಿಯಾಗಿದ್ದು ಬ್ರಿಟಿಷಯ ಯಾವುದೇ ಆಮಿಷಕ್ಕೂ ಒಳಗಾಗದೆ ತನ್ನ ಜನ್ಮಭೂಮಿಯೇ ಮುಖ್ಯ ಎಂದು ಹೋರಾಡಿದರು.ಆದರೆ ಅವರನ್ನು ಮೋಸದಿಂದ ವಂಚಿಸಿ ನೇಣಿಗೇರಿಸಲಾಯಿತು ಎಂದರು. ಭಗತ್ ಸಿಂಗ್ ರಂತಹ ಮಹಾನ್ ವ್ಯಕ್ತಿಗಳ ಬಗ್ಗೆ ರಚಿತವಾಗಿರುವ ಪುಸ್ತಕಗಳನ್ನು ಓದುವ ಮೂಲಕ ಅವರ ಬಗ್ಗೆ ಹೆಚ್ಚಿನ ವಿಚಾರಗಳನ್ನು ಅರಿಯುವಂತೆ ತಿಳಿಸಿದರು.
ಈ ವೇಳೆ ಕಿಯೋನಿಕ್ಸ್ ಯುವ ಡಾಟ್ ಕಾಮ್ ಕಂಪ್ಯೂಟರ್ ಕೇಂದ್ರದ ವ್ಯವಸ್ಥಾಪಕ ಸಿ.ಎನ್.ಪ್ರಭು, ದೇವಾಂಗ ಮಂಡಳಿಯ ದಾಸಪ್ಪ , ಎಬಿವಿಯಿಯ ಗೋಪಿನಾಥ್,ಪ್ರಸನ್ನ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಮಹಾನ್ ವ್ಯಕ್ತಿಗಳ ಜೀವನಚರಿತ್ರೆ ಒಳಗೊಂಡ ಪುಸ್ತಕಗಳ ಪ್ರದರ್ಶಿಸನ ಏರ್ಪಡಿಸಲಾಗಿತ್ತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ