ಇಲ್ಲಿನ ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿರುವ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಬುಧವಾರದಂದು ಕಾಲೇಜು ಆವರಣದಲ್ಲಿ ವಿವಿಧ ಆಟೋಟಗಳನ್ನು ನಡೆಸಲಾಯಿತು.
|
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಯೋಜಿಸಿದ್ದ ಆಟೋಟ ಸ್ಪರ್ಧೆಗೆ ಪ್ರಾಚಾರ್ಯ ಕೃಷ್ಣಮೂರ್ತಿ ಬಿಳಿಗೆರೆ ವಾಲಿಬಾಲನ್ನು ಥ್ರೋ ಮಾಡುವ ಮೂಲಕ ಚಾಲನೆ ನೀಡಿದರು. |
|
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಆಟೋಟದಲ್ಲಿ ಸ್ಪರ್ಧಿಸಿದ ಸ್ಪರ್ಧಾಳುಗಳೊಂದಿಗೆ ಪ್ರಾಚಾರ್ಯ ಕೃಷ್ಣಮೂರ್ತಿ ಬಿಳಿಗೆರೆ ಅವರು ಹಸ್ತಲಾಘವ ಮಾಡುವಮೂಲಕ ಪರಿಚಯ ಮಾಡಿಕೊಳ್ಳುತ್ತಿರುವುದು. |
ಪ್ರಾಚಾರ್ಯ ಕೃಷ್ಣಮೂರ್ತಿ ಬಿಳಿಗೆರೆ ಅವರು ವಾಲಿಬಾಲ್ ಆಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕ್ರೀಡಾಕೂಟದಲ್ಲಿ ವಾಲಿಬಾಲ್, ಬ್ಯಾಡ್ಮಿಂಟನ್, ಷಟಲ್ ಕಾಕ್, ಕಬ್ಬಡಿ, ಚೆಸ್, ಕೇರಂ ಸೇರಿದಂತೆ ಇನ್ನಿತರ ಅಥ್ಲೆಟಿಕ್ಸ್ ಆಟಗಳು ಮುಂದಿನ ಎರಡು ದಿನಗಳಕಾಲ ನಡೆಯಲಿವೆ. ತೀರ್ಪುಗಾರರಾದ ವಾಸವಿಶಾಲೆಯ ದೈಹಿಕಶಿಕ್ಷಕರಾದ ಮಂಜುನಾಥ್ ಮತ್ತು ರಾಮಸ್ವಾಮಿ , ದೈಹಿಕ ಶಿಕ್ಷಣ ಸಂಯೋಜಕ ಶಿವಯ್ಯ, ಉಪನ್ಯಾಸಕರಾದ ಅಶೋಕ್,ಶಂಕರಲಿಂಗಯ್ಯ,ಹನುಮಂತಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಕಾಲೇಜು ವಿದ್ಯಾರ್ಥಿಗಳಲ್ಲಿ ತಂಡಗಳನ್ನು ರಚಿಸಿದ್ದು ಪ್ರತಿ ವಿದ್ಯಾರ್ಥಿಗಳು ತಮಗಿಷ್ಟವಾದ ಕ್ರೀಡೆಯಲ್ಲಿ ಸ್ಪರ್ಧಿಸುವಂತೆ ಹಾಗೂ ವಿಜೇತರಿಗೆ ವಾರ್ಷಿಕೋತ್ಸವದ ದಿನ ಬಹುಮಾನ ವಿತರಿಸುವುದಾಗಿ ದೈಹಿಕ ಶಿಕ್ಷಣ ಸಂಯೋಜಕ ಶಿವಯ್ಯ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ