ಹುಳಿಯಾರು ಹೋಬಳಿಯ ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆ, ಪಟ್ಟಣದ ವಾಸವಿ ಶಾಲೆ ಹಾಗೂ ಕನಕದಾಸ ಶಾಲೆಯಲ್ಲಿ ಸೋಮವಾರದಂದು ಪ್ರಾರಂಭವಾದ ಎಸ್ಸೆಸ್ಸಲ್ಸಿ ಪರೀಕ್ಷೆ ಯನ್ನು ವಿದ್ಯಾರ್ಥಿಗಳು ಉತ್ಸಾಹದಿಂದ ಬರೆದರು.
ಎಸ್,ಎಸ್,ಎಲ್.ಸಿ. ಪರೀಕ್ಷೆ ಬರೆಯಲು ಸೋಮವಾರ ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದ ಮುಂದೆ ಹಾಜರಿದ್ದ ವಿದ್ಯಾರ್ಥಿಗಳು. |
ಪರೀಕ್ಷೆ ಪ್ರಾರಂಭದ ಮೊದಲವಾಗಿದ್ದರಿಂದ ಸೋಮವಾರದಂದು ಕೆಲ ಪೋಷಕರು ಹಾಗೂ ವಿದ್ಯಾರ್ಥಿಗಳು ಪರೀಕ್ಷೆ ಪ್ರಾರಂಭಕ್ಕೂ ಒಂದು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಗಳಲ್ಲಿ ಬಂದು ಕಾಯುತ್ತಿದ್ದಲ್ಲದೆ, ತಮ್ಮ ನೊಂದಣಿ ಸಂಖ್ಯೆಯಲ್ಲಿ ಹುಡುಕಾಟದಲ್ಲಿದ್ದರು. ಹೋಬಳಿಯ ಎಲ್ಲಾ ಪ್ರೌಢಶಾಲೆಗಳ ವಿದ್ಯಾರ್ಥಿಗಳನ್ನು ಒಂದುಗೂಡಿಸಿ ಮೂರು ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷೆ ಬರೆಯಲು ಹಾಕಿದ್ದು ಕೆಲ ವಿದ್ಯಾರ್ಥಿಗಳಿಗೆ ತಮ್ಮ ಶಾಲೆ ಬಿಟ್ಟು ಬೇರೆ ಶಾಲೆಯಲ್ಲಿ ಪರೀಕ್ಷೆ ಬರೆಯ ಬೇಕಲ್ಲ ಎಂಬ ಆತಂಕ ಉಂಟಾಗಿತ್ತು. ಮೊದಲ ದಿನ ಕನ್ನಡ ಪರೀಕ್ಷೆಯಾಗಿದ್ದರಿಂದ ಪರೀಕ್ಷಾರ್ಥಿಗಳು ತುಸು ಆರಾಮಾಗಿದ್ದರು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪರೀಕ್ಷಾಕೇಂದ್ರಗಳಲ್ಲಿ ಪೋಲಿಸ್ ನವರನ್ನು ನಿಯೋಜಿಸಿದ್ದಲ್ಲದೆ, ಮೊಬೈಲ್ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಿಷೇಧಿಸಲಾಗಿತ್ತು. ಪ್ರಶ್ನೆಪತ್ರಿಕೆಗಳ ಬಂಡಲ್ ಗಳ ಮೇಲೆ ಪರೀಕ್ಷಾರ್ಥಿಗಳ ಸಹಿ ಪಡೆದು ನಂತರ ಅವರ ಸಮ್ಮುಖದಲ್ಲಿ ತೆರೆದು ಪ್ರಶ್ನೆಪತ್ರಿಕೆ ವ್ಯವಸ್ಥೆ ಮಾಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ