ಪ್ರಾಮಾಣಿಕ, ಜನಾನುರಾಗಿದ್ದ ಹಾಗೂ ದಕ್ಷ ಐಎಎಸ್ ಅಧಿಕಾರಿಯಾಗಿದ್ದ ಡಿ.ಕೆ ರವಿ ಅವರ ಸಾವಿನ ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ನವರು ತ್ವರಿತವಾಗಿ ತನಿಖೆ ಕೈಗೊಂಡು ರವಿಅವರ ಸಾವಿನ ಹಿಂದಿನ ರಹಸ್ಯವನ್ನು ಪತ್ತೆ ಮಾಡುವಂತೆ ಆಗ್ರಹಿಸಿ ಹೋಬಳಿಯ ಯಗಚಿಹಳ್ಳಿಯ ಶ್ರೀವಿನಾಯಕ ಗೆಳೆಯರ ಬಳಗ ಹಾಗೂ ಸುತ್ತಮುತ್ತಲ ಹಳ್ಳಿಯವರು ಸೋಮವಾರ ಬೆಳಿಗ್ಗೆ ಪಾದಯಾತ್ರೆ ಮೂಲಕ ಪಟ್ಟಣದ ನಾಡಕಛೇರಿಯಲ್ಲಿಗೆ ಆಗಮಿಸಿ ಮನವಿಪತ್ರ ಸಲ್ಲಿಸಿದರು.
ಹುಳಿಯಾರು ಹೋಬಳಿ ಯಗಚಿಹಳ್ಳಿಯ ಶ್ರೀವಿನಾಯಕ ಗೆಳೆಯರ ಬಳಗ ಹಾಗೂ ಸುತ್ತಮುತ್ತಲ ಹಳ್ಳಿಯವರು ಡಿ.ಕೆ.ರವಿ ಸಾವಿನ ರಹಸ್ಯವನ್ನು ಸಿಬಿಐ ನವರು ತ್ವರಿತವಾಗಿ ಬಯಲು ಮಾಡಲಿ ಎಂದು ಉಪತಹಸೀಲ್ದಾರ್ ಅವರಿಗೆ ಮನವಿಪತ್ರ ಸಲ್ಲಿಸಿದರು.
|
ಯಗಚಿಹಳ್ಳಿಯ ಶ್ರೀ ಆಂಜನೇಯಸ್ವಾಮಿ ದೇವಾಲಯದಿಂದ ಪಾದಯಾತ್ರೆ ಪ್ರಾರಂಭವಾಗಿ ಕಂಪನಹಳ್ಳಿ ಮಾರ್ಗವಾಗಿ ಪಟ್ಟಣಕ್ಕೆ ಆಗಮಿಸಿ, ರಾಂಗೋಪಾಲ್ ಸರ್ಕಲ್ ,ಬಿಎಚ್ ರಸ್ತೆ, ರಾಜ್ ಕುಮಾರ್ ರಸ್ತೆ,ಬಸ್ ನಿಲ್ದಾಣದಲ್ಲಿ ಸಂಚರಿಸಿ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಸಾಗಿದರು.ನಂತರ ನಾಢಕಛೇರಿಗೆ ಆಗಮಿಸಿದ ಪಾದಯಾತ್ರಿಗಳು ಉಪತಹಸೀಲ್ದಾರ್ ಸತ್ಯನಾರಾಯಣ ಅವರಿಗೆ ಮನವಿ ಪತ್ರಸಲ್ಲಿಸಿದರು. ಮನವಿ ಪತ್ರ ಸ್ವೀಕರಿಸಿದ ಉಪತಹಸೀಲ್ದಾರ್ ಮಾತನಾಡಿ ತಮ್ಮ ಮನವಿಪತ್ರವನ್ನು ಮೇಲಾಧಿಕಾರಿಗಳಿಗೆ ಕಳುಹಿಸುವುದಾಗಿ ತಿಳಿಸಿದರು.
ಪಾದಯಾತ್ರೆಯಲ್ಲಿ ವಕೀಲ ಕರಿಯಪ್ಪ,ಮಧುಸೂಧನ್,ಸದಾನಂದ, ಕುಮಾರಸ್ವಾಮಿ,ನಾರಾಯಣ್,ವಸಂತ್,ಕರಿಯಪ್ಪ ಸೇರಿದಂತೆ ಯಗಚಿಹಳ್ಳಿ ಸುತ್ತಮುತ್ತಲ ಹಳ್ಳಿಯವರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ