ವಿಷಯಕ್ಕೆ ಹೋಗಿ

ರಸ್ತೆಗೆ ಸರಿಯಾಗಿ ಜೆಲ್ಲಿ, ಮಣ್ಣು ಹಾಕದೆ ಕಳಪೆ ಕಾಮಗಾರಿ

ಹುಳಿಯಾರು  ಹೋಬಳಿ ಕೆಂಕೆರೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಬರದಲೇಪಾಳ್ಯದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿದ್ದು ಈ ಬಗ್ಗೆ ಮೇಲಾಧಿಕಾರಿಗಳು ಗಮನಹರಿಸುವಂತೆ ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.
ರಸ್ತೆ ಬದಿಯಲ್ಲಿ ಗುಡ್ಡೆಮಾಡಿರುವ ಅರ್ಧ ಟ್ರ್ಯಾಕ್ಟರ್ ನಷ್ಟು ಜೆಲ್ಲಿ.
ಕೆಂಕೆರೆಯಿಂದ ತಮ್ಮಡಿಹಳ್ಳಿಗೆ ಹೋಗುವ ರಸ್ತೆಯಿಂದ ಬರದಲೇಪಾಳ್ಯ ಹಾಗೂ ದುರ್ಗಸೀಮೆಪಾಳ್ಯಕ್ಕೆ ಹೋಗುವ ರಸ್ತೆ ಕಾರ್ಯ ನಡೆಯುತ್ತಿದ್ದು ರಸ್ತೆಗೆ ಸರಿಯಾಗಿ ಜೆಲ್ಲಿಕಲ್ಲು, ಮಣ್ಣು ಹಾಕದೆ ಕಾಟಾಚಾರವೆಂಬಂತೆ ಹಾಕಿ ರೋಲರ್ ಹೊಡೆಯುತ್ತಿದ್ದಾರೆ. ಅರ್ಧ ಟ್ರ್ಯಾಕ್ಟರ್ ಲೋಡ್ ಜೆಲ್ಲಿಯನ್ನು ನೂರರಿಂದ ನೂರೈವತ್ತು ಮೀಟರ್ ವರೆಗೆ ಹಾಕುತ್ತಿದ್ದಾರೆ. ಜೆಲ್ಲಿ ಹಾಕುವ ಮೊದಲು ಯಾವುದೇ ರೀತಿಯ ಅರ್ಥ್ ವರ್ಕ್ ಸಹ ಮಾಡದೆ ಸುಮ್ಮನೆ ಜೆಲ್ಲಿ ಹರಡಿ ಅದರಮೇಲೆ ಮಣ್ಣು ಹಾಕುತ್ತಿದ್ದಾರೆ. ನಂತರ ಇದರ ಮೇಲೆಯೇ ಡಾಂಬಾರ್ ಸಹ ಹಾಕುವುದಾಗಿ ಹೇಳುತ್ತಿದ್ದು. ಇಲ್ಲಿ ಕೆಲಸ ಮಾಡುವವರನ್ನು ಕೇಳಿದರೆ ನಮ್ಮನ್ನು ಏನು ಕೇಳಬೇಡಿ ಇಂಜಿನಿಯರ್ ಅವರನ್ನ ಕೇಳಿಕೊಳ್ಳಿ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಈ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್ ಅವರಿಗೆ ಪೋನ್ ಮಾಡಿದರೆ ಸ್ಥಳಕ್ಕೆ ಬಂದು ನೋಡುತ್ತೇನೆ ಎಂದು ಹೇಳುತ್ತಾರೆ ಹೊರತು ಇದುವರೆಗೂ ಬಂದು ನೋಡಿಲ್ಲ. ಈರೀತಿ ಕಳಪೆಯಾಗಿ ರಸ್ತೆ ಮಾಡಿದರೆ ಕೆಲ ದಿನಗಳಲ್ಲೇ ಅದು ಕಿತ್ತು ಹೋಗಿ ಸಂಚಾರಕ್ಕೂ ಯೋಗ್ಯವಾಗಿರದೆ, ಸರ್ಕಾರದ ಲಕ್ಷಾಂತರ ರೂ ವ್ಯಯವಾಗುತ್ತದೆ ಶೀಘ್ರವೇ ಈ ಬಗ್ಗೆ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ಬರದಲೇಪಾಳ್ಯದ ನಿವಾಸಿ ಮಂಜುನಾಥ್ ತಿಳಿಸಿದ್ದಾರೆ.
ರಸ್ತೆ ಕಾಮಗಾರಿ ಸರಿಯಾಗಿ ಮಾಡುತ್ತಿಲ್ಲ ಸರಿಯಾಗಿ ಮಾಡಿ ಎಂದು ಕೇಳಲು ಹೋದರೆ ನಮ್ಮ ಮೇಲೆ ದಬಾಯಿಸಿ ತಮಿಷ್ಟದಂತೆ ಕಾಮಗಾರಿ ಮುಗಿಸಲು ಹೊರಟ್ಟಿದ್ದಾರೆ: ಮಂಜುನಾಥ.ಬಿ. ಬರದಲೇಪಾಳ್ಯ.

ಕಾಮೆಂಟ್‌ಗಳು