ರಾಮೇಗೌಡ ಪಾತ್ರಧಾರಿಯಾಗಿ ತಮ್ಮದೆ ಆದ ಛಾಪು ಮೂಡಿಸಿದ್ದ ಹುಳಿಯಾರಿನ ಅನಂತರಾಮಯ್ಯನವರು ಜೀವನದ ಅಂಕಣದಿಂದಲೇ ಮರೆಯಾಗಿದ್ದಾರೆ.ತಮ್ಮ ಬದುಕಿನ ನಾಟಕವನ್ನು ಮುಗಿಸಿ ಮರೆಯಾದ ರಾಮಣ್ಣಯ್ಯ ಇನ್ನಿಲ್ಲ ಅನ್ನುವ ಧೈರ್ಯ ನನ್ನಲಿಲ್ಲ.ಅವರು ಯಾರ ಮನಸ್ಸಿನಿಂದಲ್ಲೂ ಮರೆಯಾಗದ ಕಾರಣ ಅವರು ಚಿರಂಜೀವಿಯಾಗಿದ್ದಾರೆ ಅಂತಾನೇ ಹೇಳಬಹುದು.
ಹುಳಿಯಾರಿನ ಕೇಶವ ಕೃಪದ ಹಿರಿಯರಾದ ರಾಮಣ್ಣಯ್ಯ ಆ ಕುಟುಂಬದ ಕಿರಿಯರಿಂದ ಹಿರಿಯರವರೆಗೂ ತುಂಬು ಗೌರವಕ್ಕೆ ಪಾತ್ರರಾಗಿದ್ದರು. ಜೀವನಕ್ಕಾಗಿ ಹಲವಾರು ವೃತ್ತಿ ಮಾಡಿ ಎಲ್ಲದರಲ್ಲೂ ಸೈ ಎನ್ನಿಸಿಕೊಂಡಿದ್ದ ರಾಮಣ್ಣಯ್ಯ ನಟನಾಗಿ ರಾಮೇಗೌಡನ ಪಾತ್ರಧಾರಿಯಾಗಿ ನಮ್ಮ ಮನದಲ್ಲಿನ್ನೂ ಮಾಸದ ನೆನಪಾಗಿ ಕಾಡುತ್ತಾರೆ.ಹುಟ್ಟುತ್ತಾಅಣ್ಣತಮ್ಮಂದಿರು-ಬೆಳೆಯುತ್ತಾ ದಾಯಾದಿಗಳು ಎನ್ನುವಂತೆ ಅಣ್ಣತಮ್ಮಂದಿರಿಬ್ಬರೂ ಹುಣುಸೆಮರದ ಪಾಲಿಗಾಗಿ ಯಾವ ಮಟ್ಟಕ್ಕೆ ವೈಷಮ್ಯಕ್ಕೆ ಕಾರಣರಾಗುತ್ತಾರೆಂಬ ಹಳ್ಳಿಚಿತ್ರದಲ್ಲಿ ತಮ್ಮ ಮನೋಘ್ನ ಅಭಿನಯದಿಂದ ರಾಜ್ಯದ್ಯಂತ ನಾಟಕ ಪ್ರದರ್ಶನ ನೀಡಿ ಮನೆಮಾತಾಗಿದ್ದರು.
ಮರೆಯಾದ ಚೇತನ ಅನಂತರಾಮಯ್ಯನವರೊಂದಿಗೆ ನಾನು |
ಆ ಕಾಲದಲ್ಲೆ ಬಾಲ್ ಬ್ಯಾಡ್ ಮಿಂಟನ್ ಆಟಗಾರರಾಗಿ ಹೆಸರಾಗಿದ್ದವರು.ಮತ್ತೋಡು ,ಕಂಚೀಪುರದ ಮೂಲಕ ಹೊಸದುರ್ಗಕ್ಕೆ ರಸ್ತೆ ಕಾಮಗಾರಿ ನಡೆಯುತ್ತಿದ್ದ ಸಮಯದಲ್ಲಿ ಗುತ್ತಿಗೆದಾರರಾಗಿ ಕಂಟ್ರಾಕ್ಟರ್ ರಾಮಣ್ಣ ಎಂದೆ ಗುರ್ತಿಸಿಕೊಂಡಿದ್ದ ರಾಮ್ಮಣ್ಣನವರು ಕೆಲದಿನಗಳ ಕಾಲ ಗೌರ್ನಮೆಂಟ್ ಬಸ್ ಏಜೆಂಟ್ ಆಗಿ ಕೂಡ ಕಾರ್ಯನಿರ್ವಹಿಸ್ಸಿದ್ದರು.ಆಗಿನ್ನು ಖಾಸಗಿ ಬಸ್ಸುಗಳು ಮನಾಪಲಿಯಾಗಿ ಸರ್ಕಾರಿ ಬಸ್ ಪ್ರಾರಂಭವಾಗಿದ್ದ ಕಾಲ.ಹುಳಿಯಾರಿನಿಂದ ಬೆಂಗಳೂರಿಗೆ 3.60 ಛಾರ್ಜು.ಹೊಸದಾಗಿ ಶುರುಮಾಡಿದರಿಂದ ಸರ್ಕಾರಿ ಬಸ್ಸಿಗೀ ಏಜೆಂಟರು ಬೇಕಾಗಿದ್ದು ನಮ್ಮ ರಾಮ್ಮಣ್ಣನವರು ಆ ಕೆಲಸ ಕೂಡ ಮಾಡಿದ್ದರು.ಅಲ್ಲದೆ ಈಗಿರುವ ಗಣಪತಿ ದೇವಾಲಯದ ಜಾಗದಲ್ಲಿ ಮಿಲ್ ಗೋಪಾಲಶೆಟ್ರು ಅವರ ನಾಗಲಕ್ಷ್ಮಿ ಟೂರಿಂಗ್ ಟಾಕೀಸ್ ಇತ್ತು.ಅದರ ಉಸ್ತುವಾರಿ ನೋಡೊ ಕೆಲಸ ಕೂಡ ನಿರ್ವಹಿಸಿದ್ದರು.
ಕನ್ನಡಪ್ರಭ ಸುದ್ದಿ |
ಇದರೊಟ್ಟಿಗೆ ಸಾಮಾಜಿಕ ಕೆಲಸದಲ್ಲಿ ಕೂಡ ಆಸಕ್ತಿ ಹೊಂದಿದ್ದ ರಾಮಣ್ಣನವರು ಶ್ರೀರಾಮ ಸೇವಾಸಂಘದಲ್ಲಿ ಸಕ್ತಿಯವಾಗಿದ್ದುಕೊಂಡು ಇದೇ ಹೆಸರಿನಲ್ಲಿ ವಿಪ್ರ ಸಮಾಜದಿಂದ ಛತ್ರ ಕಟ್ಟುವ ಯೋಜನೆ ಹೊಂದು ಲಾರಿ ಅನಂತಣ್ಣನವರ ಅಧ್ಯಕ್ಷರನ್ನಾಗಿ ನಮ್ಮಪ್ಪನವರನ್ನು ಉಪಾಧ್ಯಕ್ಷರನ್ನಾಗಿ ಮಾಡಿ ಸೀರಾರಾಮ ಪ್ರತಿಷ್ಟಾನ ರಚಿನೆಗೆ ಕಾರಣರಾಗಿದ್ದರು.ಅದರ ಗೌರವಾಧ್ಯಕ್ಷರಾಗಿದ್ದುಕೊಂಡೆ ಹುಳಿಯಾರಿಗೆ ಸುಸ್ಸಜ್ಜಿತ ಕಲ್ಯಾಣ ಮಂದಿರ ಕಟ್ಟಲು ನೆರವಾದರು.
ಅಂತ್ಯಸಂಸ್ಕಾರಕ್ಕೆ ಸುಸಜ್ಜಿತವಾದ ಜಾಗಯಿರಬೇಕೆನ್ನುವ ದೃಷ್ಟಿಯಿಂದ ಸಾರ್ವಜನಿಕರು ಹಾಘೂ ದಾನಿಗಳ ನೆರವಿನಿಂದ ಮುಕ್ತಿಧಾಮ ಕಟ್ಟಲು ಮುಂದಾಳತ್ವ ವಹಿಸಿದ್ದರು.ಅಲ್ಲದೆ ಅದೇ ಮುಕ್ತಿಧಾಮದಲ್ಲೆ ತಮ್ಮ ಅಂತ್ಯ ಸಂಸ್ಕಾರ ನೆರವೇರಬೇಕೆಂಬ ಆಶಯ ಹೊಂದಿದ್ದರು.ಅದರಂತೆ ಮಾರ್ಚ್ 9 ರ ಸೋಮವಾರ ತಿಪಟೂರಿನ ತಮ್ಮ ಮಗನ ಮನೆಯಲ್ಲಿ ನಿಧನರಾದ ರಾಮಣ್ಣಯನವರ ಅಂತ್ಯಸಂಸ್ಕಾರ ನಮ್ಮೂರಿನ ವಿಪ್ರಸಮಾಜದ ನೆರವಿನಿಂದ ನೆರವೇರಿದ್ದು ಅವರ ಕಡೆ ಆಸೆ ಪೂರೈಸಿದ ಅಲ್ಪತೃಪ್ತಿ ನಮ್ಮ ಸಮಾಜಕ್ಕಿದೆ.
ನಮ್ಮ ಕುಟುಂಬದ ಹಿತೈಷಿಯಾಗಿದ್ದ ರಾಮ್ಮಣ್ಣನವರು ನನ್ನ ಇಂದಿನ ಬೆಳವಣಿಗೆಗೆ ಕಾರಣೀಕರ್ತರು ಅಂತ ಹೇಳುವುದಕ್ಕೆ ನನಗೆ ಹೆಮ್ಮೆಯಿದೆ.ನನ್ನನ್ನು ಮೊದಲು ನಮ್ಮೂರ ಬ್ರಾಹ್ಮಣಸಮಾಜದ ಉಪಾಧ್ಯಕ್ಷನನ್ನಾಗಿ ಆನಂತರ ಅಧ್ಯಕ್ಷನನ್ನಾಗಿ ಮಾಡಲು ಇವರೇ ಕಾರಣರು.ಸಧ್ಯ ತಾಲ್ಲೂಕಿನ ಅಧ್ಯಕ್ಷನಾಗಿ ಜಿಲ್ಲೆಯಲ್ಲೂ ಗುರ್ತಿಸಿಕೊಳ್ಳಲೂ ಇವರ ಆಶಿರ್ವಾದವೇ ಕಾರಣ ಅಂತ ಸದಾ ನೆನೆಯುತ್ತಾ ಈ ಬರಹದ ಮೂಲಕ ನನ್ನ ಶ್ರದ್ಧಾಂಜಲಿ ಅರ್ಪಿಸುತ್ತಿರುವೆ......
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ