ಹುಳಿಯಾರು ಪಟ್ಟಣದಿಂದ ಚಿ.ನಾ.ಹಳ್ಳಿಗೆ ಹೋಗುತ್ತಿದ್ದ ಬೈಕ್ ಗೆ ಹಿಂಬದಿಯಿಂದ ಬಂದ ಟಾಟಾ ಎಸಿ ಗುದ್ದಿದ ಪರಿಣಾಮ ಬೈಕ್ ನ ಹಿಂಬದಿ ಸವಾರ ಸಾವನಪ್ಪಿ, ಬೈಕ್ ಚಾಲಕನಿಗೆ ತೀವ್ರಗಾಯಗಳಾದ ಘಟನೆ ದೊಡ್ಡಬಿದರೆ ಸಮೀಪದ ಡಾಕ್ಟರ್ ಗೇಟ್ ಬಳಿ ಭಾನುವಾರ ರಾತ್ರಿ ಘಟಿಸಿದೆ.
ಮೃತ ವ್ಯಕ್ತಿಯನ್ನು ಚಿಕ್ಕನಾಯಕನಹಳ್ಳಿ ಪಟ್ಟಣದ ಶಿವಣ್ಣ(೪೦) ಎಂದು ಗುರ್ತಿಸಲಾಗಿದ್ದು, ಈತ ವೃತ್ತಿಯಲ್ಲಿ ಛಾಯಾಗ್ರಾಹಕವಾಗಿದ್ದ ಈತ ಸ್ನೇಹಿತನ ಜೊತೆ ಚಿಕ್ಕನಾಯಕನಹಳ್ಳಿಗೆ ತೆರಳುವಾಗ ಈ ಘಟನೆ ನಡೆದಿದೆ. ತೀವ್ರ ಗಾಯಗೊಂಡ ಈತನನ್ನು ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನಪ್ಪಿದ್ದಾನೆ. ಬೈಕ್ ಚಾಲನೆ ಮಾಡುತ್ತಿದ್ದ ಚಿಕ್ಕನಾಯಕನಹಳ್ಳಿಯ ಚಿದಾನಂದ್ ರಾವ್ ಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಹುಳಿಯಾರು ಠಾಣೆಯಲ್ಲಿ ದಾಖಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ