ದೇಶಾದ್ಯಂತ ಹತ್ತಾರೂ ಸಂಘಟನೆಗಳಿದ್ದರೂ ಸಹ ರೈತ ಸಂಘಟನೆಯಲ್ಲಿನ ಬಲ ಯಾವುದೇ ಸಂಘಟನೆಯಲ್ಲಿ ಕಂಡುಬರುವುದಿಲ್ಲ. ರೈತ ಸಂಘಟನೆಯ ಬಲ ಸಾವಿರ ಆನೆಗಳ ಬಲವಿದ್ದಂತೆ ಎಂದು ಗುಬ್ಬಿತಾಲ್ಲೂಕ್ ರೈತಸಂಘದ ಅಧ್ಯಕ್ಷ ನಿಜಾನಂದ ಮೂರ್ತಿ ಅಭಿಮತವ್ಯಕ್ತಪಡಿಸಿದರು.
ಹುಳಿಯಾರು ಹೋಬಳಿ ನಂದಿಹಳ್ಳಿಯಲ್ಲಿ ನಡೆದ ರಾಜ್ಯ ರೈತಸಂಘ(ಪುಟ್ಟಣ್ಣಯ್ಯ ಬಣ) ಹಾಗೂ ಹಸಿರು ಸೇನೆಯ ನೂತನ ಗ್ರಾಮ ಘಟಕದ ನೂತನ ಸಂಘದ ಉದ್ಘಾಟನೆಯನ್ನು ಗುಬ್ಬಿತಾಲ್ಲೂಕ್ ರೈತಸಂಘದ ಅಧ್ಯಕ್ಷ ನಿಜಾನಂದ ಮೂರ್ತಿ ನೆರವೇರಿಸಿದರು. |
ರಾಜ್ಯ ರೈತಸಂಘ(ಪುಟ್ಟಣ್ಣಯ್ಯ ಬಣ) ಹಾಗೂ ಹಸಿರು ಸೇನೆವತಿಯಿಂದ ಹುಳಿಯಾರು ಹೋಬಳಿ ನಂದಿಹಳ್ಳಿಯಲ್ಲಿ ಭಾನುವಾರ ನಡೆದ ನೂತನ ಗ್ರಾಮ ಘಟಕದ ನೂತನ ಸಂಘದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ರೈತ ಸಂಘಟನೆಗಳಿಗೆ ತಮ್ಮದೇ ಆದ ಶಕ್ತಿಯಿದ್ದು, ಆ ಶಕ್ತಿಯನ್ನು ರೈತರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಪಡೆಯುವಲ್ಲಿ, ರೈತರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಬಳಸಿಕೊಳ್ಳಬೇಕು ಎಂದರು. ಪ್ರಸ್ತುತದಲ್ಲಿ ಭಂಡವಾಳಶಾಹಿಗಳು ರೈತರನ್ನು ಹೆದರಿಸುತ್ತಿರುವುದಲ್ಲದೆ, ಇಲ್ಲ ಸಲ್ಲದನ್ನು ರೈತರಲ್ಲಿ ತುಂಬಿ ರೈತ ಸಂಘಟನೆಯಲ್ಲಿ ಒಡಕುಂಟು ಮಾಡುತ್ತಿದ್ದಾರೆ. ಇಂತಹದರ ಬಗ್ಗೆ ರೈತರು ಗಮನಕೊಡದೆ ಸಂಘಟನೆಗೆ ಹೆಚ್ಚು ಮಹತ್ವ ಕೊಡುವ ಮೂಲಕ ಸಂಘಟನೆಯನ್ನು ಉಳಿಸಿ ಬೆಳೆಸುವಂತೆ ತಿಳಿಸಿದರು. ಗ್ರಾಮದ ಪ್ರತಿಯೊಬ್ಬರು ಸಹ ಈ ಸಂಘಟನೆಯಲ್ಲಿ ಸೇರಿಕೊಂಡು ಸಂಘಟನೆಯನ್ನು ಬಲಪಡಿಸಿ ರೈತರಿಗಾಗುವ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿ ಎಂದರು.
ಈ ವೇಳೆ ಚಿ.ನಾ.ಹಳ್ಳಿ ತಾಲ್ಲೂಕು ರೈತಸಂಘದ ಗೌರವಾಧ್ಯಕ್ಷ ಕಾಡೇನಹಳ್ಳಿ ಗಂಗಾಧರ್, ರೈತ ಮುಖಂಡ ಹೊಸಳ್ಳಿ ಚಂದ್ರಪ್ಪ, ನಿವೃತ್ತ ಉಪನ್ಯಾಸಕ ಸಿದ್ದಬಸವಯ್ಯ,ಸದಸ್ಯರಾದ ಗೊಲ್ಲರಹಟ್ಟಿ ಕೊಟ್ರೇಶ್, ಹೊನ್ನಪ್ಪ,ರಾಜಣ್ಣ,ಮರುಳಪ್ಪ,ರೇವಣ್ಣ ಸೇರಿದಂತೆ ನಂದಿಹಳ್ಳಿಯ ರೈತರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ