ಪ್ರಸ್ತುತದಲ್ಲಿ ನಮ್ಮ ಸುತ್ತಲಿನ ಪರಿಸರದ ಸ್ವಾಸ್ಥ್ಯವನ್ನು ನಾವೇ ಹದಗೆಡುವಂತೆ ಮಾಡುವ ಮೂಲಕ ಅನೈರ್ಮಲ್ಯತೆಯನ್ನು ಸೃಷ್ಠಿಸಿ ಅನೇಕ ಮಾರಕ ರೋಗಗಳ ಬಾಯಿಗೆ ತುತ್ತಾಗುತ್ತಿದ್ದೇವೆ. ಇದರಿಂದ ದೂರವಿರಬೇಕೆಂದರೆ ಜನಸಮುದಾಯದವರೆಲ್ಲಾ ನಮ್ಮನಮ್ಮ ಮನೆಯ ಅಕ್ಕಪಕ್ಕದಲ್ಲಿನ ತ್ಯಾಜ್ಯವನ್ನು ನಾವೇ ಕ್ಲೀನ್ ಮಾಡಿಕೊಳ್ಳುವ ಮೂಲಕ ಸ್ವಚ್ಚತೆ ಕಡೆ ಗಮನಕೊಡುವಂತೆ ಎಲ್.ಆರ್.ಚಂದ್ರಶೇಖರ್ ತಿಳಿಸಿದರು.
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕ ಹಾಗೂ ಯುವರೆಡ್ ಕ್ರಾಸ್ ಸಹಯೋಗದಲ್ಲಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿಗಳು ಜಾಥಾ ನಡೆಸಿದರು. |
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕ ಹಾಗೂ ಯುವರೆಡ್ ಕ್ರಾಸ್ ಸಹಯೋಗದಲ್ಲಿ ಸ್ವಚ್ಚ ಭಾರತ್ ಅಭಿಯಾನದಡಿ ಸಾರ್ವಜನಿಕರಲ್ಲಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿಗಳು ನಡೆಸಿದ ಜಾಥಾದಲ್ಲಿ ಅವರು ಮಾತನಾಡಿದರು.
ಹುಳಿಯಾರು ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿರಾಶಿಯೇ ಗೋಚರಿಸುತ್ತಿದ್ದು, ಅನೈರ್ಮಲ್ಯ ತಾಂಡವವಾಡುತ್ತಿದೆ. ಇದನ್ನು ಕಂಡರೂ ಕಾಣದಂತೆ ಜನ ಓಡಾಡುತ್ತಿದ್ದಾರೆ, ಪಟ್ಟಣದಲ್ಲಿ ಸ್ವಚ್ಚತಾ ಕಾರ್ಯ ಮಾಡಬೇಕಾದ ಗ್ರಾ.ಪಂ.ನವರು ಸಹ ಮೌನವಹಿಸಿದ್ದಾರೆ ಎಂದರು. ಗ್ರಾ.ಪಂಯವರು ಮಾಡಬೇಕಾದ ಸ್ವಚ್ಚತಾ ಕಾರ್ಯವನ್ನು ಕಾಲೇಜು ವಿದ್ಯಾರ್ಥಿಗಳು ಮಾಡಲು ಹೊರಟಿರುವುದು ಶ್ಲಾಘನೀಯ ಎಂದರು. ಇನ್ನಾದರೂ ಸಮುದಾಯದವರು ಎಚ್ಚೆತ್ತು ಎಲ್ಲೆಂದರಲ್ಲಿ ಕಸವನ್ನು ಬಿಸಾಡದೆ ಸೂಕ್ತ ಸ್ಥಳದಲ್ಲಿ ಹಾಕುವಂತೆ ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ಮಾಡದಂತೆ ಮನವಿ ಮಾಡಿದರು.
ಉಪನ್ಯಾಸಕ ಹನುಮಂತಪ್ಪ ಮಾತನಾಡಿ , ಮೊದಲು ಮನೆ ನಂತರ ಗ್ರಾಮವನ್ನು ಸ್ವಚ್ಚಗೊಳಿಸಿದರೆ ಆಮೇಲೆ ದೇಶ ಸ್ವಚ್ಚಗೊಳುತ್ತದೆ.ಆ ನಿಟ್ಟಿನಲ್ಲಿ ಜನ ಮುಂದಾಗಬೇಕು ಹಾಗೂ ವಿದ್ಯಾರ್ಥಿಗಳು ಸ್ವಚ್ಚತಾ ಕಾರ್ಯದಲ್ಲಿ ತೊಡಗಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಬೇಕು ಹಾಗೂ ತಮ್ಮ ಗ್ರಾಮಗಳಲ್ಲಿ ಸ್ವಚ್ಚತೆ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಬೇಕು ಎಂದರು.
ಪ್ರಾಚಾರ್ಯ ಕೃಷ್ಣಮೂರ್ತಿಬಿಳಿಗೆರೆ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಜಾಥಾ ನಡೆಸಿದರು. ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಿಂದ ಪ್ರಾರಂಭವಾದ ಜಾಥಾ ಪಟ್ಟಣದ ಗಲ್ಲಿಗಲ್ಲಿಗಳಲ್ಲಿ ಸಾಗುತ್ತಾ ವಿದ್ಯಾರ್ಥಿಗಳು ಸ್ವಚ್ಚತೆಗೆ ಸಂಬಂಧಿಸಿದ ಘೋಷಣೆಗಳನ್ನು ಕೂಗುತ್ತಾ, "ಹುಳಿಯಾರನ್ನು ಗಬ್ಬುಗೆಡಿಸಲು ಯಾರಿಗೂ ಹಕ್ಕಿಲ್ಲ" ಎಂಬ ಭಿತ್ತಿಪತ್ರಗಳನ್ನು ಸಾರ್ವಜನಿಕರಿಗೆ ನೀಡುತ್ತಾ ಅರಿವುಂಟು ಮಾಡುತ್ತಿದ್ದರು. ಈ ವೇಳೆ ವೈದ್ಯರಾದ ಚಂದನಾ, ಶಿವಾನಂದ್, ರೆಡ್ ಕ್ರಾಸ್ ನ ರಮಾಕಾಂತ್, ಉಪನ್ಯಾಸಕರಾದ ಶಂಕರಲಿಂಗಯ್ಯ, ಅಶೋಕ್,ಇಬ್ರಾಹಿಂ, ಚಂದ್ರಮೌಳಿ, ಕುಮಾರಸ್ವಾಮಿ,ಶಿವಯ್ಯ ಹಾಗೂ ಕಾಲೇಜು ಸಿಬ್ಬಂದಿಯವರು ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ