ಹುಳಿಯಾರು ಹೋಬಳಿ ಕನ್ನಡಸಾಹಿತ್ಯ ಪರಿಷತ್ ನವರು ಆಯೋಜಿಸಿಕೊಂಡು ಬರುತ್ತಿರುವ ಮನೆಮನೆಗಳಲ್ಲಿ ಪಾಕ್ಷಿಕ ಕನ್ನಡಕವಿಕಾವ್ಯ ಗೋಷ್ಠಿಯಲ್ಲಿ ಸರ್ವಜ್ಞನ ತ್ರಿಪದಿಗಳ ಸಂದೇಶ ಕುರಿತು ಉಪನ್ಯಾಸ ನಡೆಯಿತು.
ಹೋಬಳಿಯ ಸೀಗೆಬಾಗಿ ಗ್ರಾಮದ ಮುಖ್ಯಶಿಕ್ಷಕರಾದ ಡಿ.ಮಹೇಶ್ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕ ನಂದಿಹಳ್ಳಿಯ ಯಲ್ಲಪ್ಪ ತ್ರಿಪದಿಗಳ ಬ್ರಹ್ಮ ಸರ್ವಜ್ಞನು ಬೆಳೆದು ಬಂದ ದಾರಿ ಹಾಗೂ ಆತ ರಚಿಸಿದ ತ್ರಿಪದಿಗಳ ಮಹತ್ವ ಕುರಿತು ಉಪನ್ಯಾಸ ನೀಡಿದರು. ಜ್ಞಾನಸಂಪಾದನೆ, ಗುರುತ್ವ,ಸಂಸಾರ,ವಿದ್ಯೆಯ ಮಹತ್ವ, ದಾನ-ಧರ್ಮ,ದೈವನಂಬಿಕೆ,ನಡೆನುಡಿ, ಸಜ್ಜನ-ದುರ್ಜನರ ಸ್ವಭಾವ ಮುಂತಾದ ವಿಷಯಗಳನ್ನು ತ್ರಿಪದಿಗಳ ಮೂಲಕ ಉಲ್ಲೇಖಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ನಿವೃತ್ತ ಮುಖ್ಯಶಿಕ್ಷಕ ಎಸ್.ಚಿಕ್ಕಣ್ಣ ಮಾತನಾಡಿ, ಕ್ಷಣಿಕ ಸುಖಕ್ಕಾಗಿ ದುರ್ಮಾರ್ಗ ಹಿಡಿಯದೆ ಸನ್ಮಾರ್ಗದಲ್ಲಿ ನಡೆಯುವ ಮೂಲಕ ನಮ್ಮ ಬಾಳನ್ನು ಸಾರ್ಥಕಪಡಿಸಿಕೊಳ್ಳಲು ಸರ್ವಜ್ಞನ ತ್ರಿಪದಿಗಳು ದಾರಿದೀಪವಾಗಿವೆ ಎಂದರು. ಕಸಾಪದ ತ.ಶಿ.ಬಸವಮೂರ್ತಿಯವರು ಆರೋಗ್ಯ, ಕೌಟುಂಬಿಕ ಜೀವನ ಕುರಿತ ತ್ರಿಪದಿಗಳನ್ನು ಉಲ್ಲೇಖಿಸಿದರು. ಇದಕ್ಕೂ ಮುನ್ನ ಹುಳಿಯಾರಿನಲ್ಲಿ ಕನ್ನಡ ಸಂಘ ಕಟ್ಟಲು ಶ್ರಮಿಸಿದ್ದ ಹಾಗೂ ವಿಪ್ರ ಸಮಾಜದ ಹಿರಿಯರೂ ಆಗಿದ್ದ ಎಚ್.ಕೆ.ಅನಂತರಾಮಯ್ಯ ಅವರು ಇತ್ತೀಚೆಗೆ ನಿಧನರಾಗಿದ್ದ ಹಿನ್ನಲೆಯಲ್ಲಿ ಶ್ರದ್ದಾಂಜಲಿ ಸಮರ್ಪಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ