ಹುಳಿಯಾರು ಹೋಬಳಿ ದಸೂಡಿ ಗ್ರಾಮದ ಶೀ ಆಂಜನೇಯಸ್ವಾಮಿ ಜಾತ್ರಾಮಹೋತ್ಸವ ಹಾಗೂ ದನಗಳ ಜಾತ್ರೆ (ತಾ.೨೬) ಗುರುವಾರದಿಂದ ಪ್ರಾರಂಭಗೊಳ್ಳಲಿದ್ದು ತಾ.೫ರ ಭಾನುವಾರದವರೆಗೆ ಹನ್ನೊಂದು ದಿನಗಳ ಕಾಲ ನಡೆಯಲಿದೆ.
ತಾ.೨೬ರ ಗುರುವಾರ ಆಂಜನೇಯಸ್ವಾಮಿ ಮೂಲವಿಗ್ರಹಕ್ಕೆ ಅಂಕುರಾರ್ಪಣೆ,ಚಂದ್ರಮಂಡಲೋತ್ಸವ ಹಾಗೂ ಉತ್ಸವ ಮೂರ್ತಿಗೆ ಅಂಕುರಾರ್ಪಣೆ ,ತಾ.೨೭ರ ಶುಕ್ರವಾರ ಬೆಳಿಗ್ಗೆ ಧ್ವಜಾರೋಹಣ , ಅಡ್ಡಪಲ್ಲಕ್ಕಿ ಉತ್ಸವ ನಡೆದು ರಾತ್ರಿ ಸರ್ಪವಾಹನೋತ್ಸವ ನಡೆಯಲಿದೆ.ತಾ.೨೮ರ ಶನಿವಾರ ಇಂದ್ರಜಿತುವಾಹನೋತ್ಸವ,ತಾ.೨೯ರ ಭಾನುವಾರ ಬೆಳಿಗ್ಗೆ ಅಭಿಷೇಕ,ಸಹಸ್ರನಾಮ ಪೂಜೆ,ಅಷ್ಟೋತ್ತರ, ಪ್ರಸಾದವಿನಿಯೋಗ ನಂತರ ರಾಮೋತ್ಸವ ಪಾನಕಪೂಜೆ,ಭಜನಾ ಕಾರ್ಯಕ್ರಮ, ಮಧ್ಯಾಹ್ನ ನೂರೊಂದೆಡೆ ಸೇವೆ,ಮಹಾಸಂತರ್ಪಣೆ ನಡೆದು ಅದೇ ದಿನ ಸಂಜೆ ಗೊಯ್ಡಗೆರೆದುರ್ಗಮ್ಮದೇವರ ಆಗಮನವಾಗಲಿದೆ.
ತಾ.೩೦ರ ಸೋಮವಾರ ಬೆಳಗಿನ ಜಾವ ಗಜವಾಹನೋತ್ಸವ.ಶ್ರೀ ಸ್ವಾಮಿಯ ಪುರ ಪ್ರವೇಶ,ತಾ.೩೧ರ ಮಂಗಳವಾರ ಬೆಳಗ್ಗೆ ಬ್ರಹ್ಮ ರಥೋತ್ಸವ ನಡೆದು ನಂತರ ಬ್ರಾಹ್ಮಣ ಸಂತರ್ಪಣೆ,ಪಾನಕಾನಿವಾರ ನಡೆದು ಇದೇ ದಿನ ಸಂಜೆ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ತಾ.೧ರ ಬುಧವಾರ ಬ್ರಾಹ್ಮಣರಿಗೆ ಸಂತರ್ಪಣೆ ಹಾಗೂ ಕೊಠಾರೋತ್ಸವ, "ಮುಳ್ಳುಪಾದಿಕೆ ಸೇವೆ", ತಾ.೨ರ ಗುರುವಾರ ಮುಂಜಾನೆ ಹಾಲು ಪಲ್ಲಕ್ಕಿ ಉತ್ಸವ, ಮಂಗಳ ಸ್ನಾನ(ಓಕುಳಿ) ಪಾನಕ ಪೂಜೆ,ತಾ.೩ರ ಶುಕ್ರವಾರ ರಾತ್ರಿ ಮುತ್ತಿನಪಲ್ಲಕ್ಕಿ ಉತ್ಸವ, ಅನ್ನಸಂತರ್ಪಣೆ.ತಾ.೪ರ ಶನಿವಾರ ರಾತ್ರಿ ಪುಷ್ಪವಾಹನೋತ್ಸವ,ತಾ.೫ರ ಭಾನುವಾರ ನವಿಲುವಾಹನೋತ್ಸವ ನಡೆಯಲಿದ್ದು ದಸೂಡಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ದೇವಾಲಯ ಸಮಿತಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ