ದಕ್ಷ ಅಧಿಕಾರಿಯಾಗಿ ಹೆಸರಾಗಿದ್ದ ಡಿ.ಕೆ.ರವಿ ಅಸಹಜವಾಗಿ ಸಂಶಯಾಸ್ಪದ ರೀತಿಯಲ್ಲಿ ಸಾವನಪ್ಪಿರುವುದು ದುರಂತವಾಗಿದ್ದು ನಾಡು ಒಬ್ಬ ಪ್ರಾಮಾಣಿಕ ಅಧಿಕಾರಿಯನ್ನು ಕಳೆದುಕೊಂಡಂತಾಗಿದೆ ಎಂದು ಮಾಜಿ ಜಿ.ಪಂ.ಸದಸ್ಯ ಬೆಳ್ಳಾರದ ಈರಣ್ಣ ಕಂಬನಿ ಮಿಡಿದರು.
ಹುಳಿಯಾರು ಹೋಬಳಿ ಬೆಳ್ಳಾರದ ಸರ್ಕಾರಿ ಶಾಲಾವರಣದಲ್ಲಿ ಸಾರ್ವಜನಿಕರಿಂದ ಮಂಗಳವಾರ ಡಿ.ಕೆ.ರವಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. |
ಹುಳಿಯಾರು ಹೋಬಳಿ ಬೆಳ್ಳಾರದ ಸರ್ಕಾರಿ ಶಾಲಾವರಣದಲ್ಲಿ ಸಾರ್ವಜನಿಕರಿಂದ ಮಂಗಳವಾರ ಅಯೋಜಿಸಿದ್ದ ಡಿ.ಕೆ.ರವಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾವಿನ ಬಗ್ಗೆ ಈಗಾಗಲೇ ಸಿಬಿಐ ತನಿಖೆಗೆ ಸರ್ಕಾರ ಮುಂದಾಗಿದ್ದು ಶೀಘ್ರವೇ ನಿಸ್ಪಕ್ಷಪಾತ ತನಿಖೆಯಿಂದ ಸತ್ಯ ಹೊರಬೀಳಲಿದ್ದು , ಅಲ್ಲಿಯವರೆಗೂ ಎಲ್ಲರೂ ತಾಳ್ಮೆಯಿಂದಿರುವಂತೆ ಕೋರಿದರು.
ಈ ಸಂದರ್ಭದಲ್ಲಿ ಪವನ್,ರಾಘವೇಂದ್ರ,ಚಿದಾನಂದ,ಗಿರೀಶ್ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ