ಹುಳಿಯಾರು ಪಟ್ಟಣದ ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಪಟ್ಟಣದ ಬಾಲಕಿಯರ ಸ್ವಂತಂತ್ರ ಪದವಿ ಪೂರ್ವ ಕಾಲೇಜು , ಕನಕದಾಸ ಕಾಲೇಜು ಸೇರಿದಂತೆ ಬೋರನಕಣಿವೆ, ಎಣ್ಣೆಗೆರೆ , ಮತ್ತಿಘಟ್ಟ, ಬೆಳುಗುಲಿ ಕಾಲೇಜುಗಳ ಪರೀಕ್ಷಾಕೇಂದ್ರದಲ್ಲಿ ಮಾರ್ಚ್ ೧೨ ರಿಂದ ೨೭ ರವರೆಗೆ ಪರೀಕ್ಷೆಗಳು ನಡೆಯಲಿವೆ.
೭ ಪಿಯು ಕಾಲೇಜುಗಳಲ್ಲಿ ಕಲಾ ವಿಭಾಗ, ವಿಜ್ಞಾನ ವಿಭಾಗ, ವಾಣಿಜ್ಯ ವಿಭಾಗದಿಂದ ಒಟ್ಟು ೬೦೦ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು , ಯಾವುದೇ ದುರ್ಘಟನೆ ಸಂಭವಿಸಿದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿರುವುದಾಗಿ ಹಾಗೂ ಪರೀಕ್ಷಾಕೇಂದ್ರದ ಒಳಗೆ ಮೊಬೈಲ್ ಪೋನ್, ಲ್ಯಾಪ್ ಟಾಪ್, ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಿದ್ಯಾರ್ಥಿಗಳು ತರದಂತೆ ನಿಷೇದಿಸಲಾಗಿದೆ ಎಂದು ಪರೀಕ್ಷಾಮುಖ್ಯಾಧಿಕಾರಿ ಸಿ.ಶಿವರುದ್ರಯ್ಯ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ