ಪ್ರಸ್ತುತದಲ್ಲಿ ಮದುವೆ ಸಮಾರಂಭಗಳು ಹೆಚ್ಚು ಆಡಂಬರದಿಂದ ನಡೆಯುತ್ತಿವೆ ಹೊರತು ಅದರಿಂದ ಯಾವುದೇ ರೀತಿಯ ಪ್ರಯೋಜವಾಗುತ್ತಿಲ್ಲ ಅಂತಹ ಆಡಂಬರದ ಮದುವೆಆಚರಣೆ ಮಾಡುವ ಬದಲು ಸರಳವಾಗಿ ಮದುವೆ ಸಮಾರಂಭಗಳನ್ನು ಕೈಗೊಳ್ಳುವಂತೆ ಚಿತ್ರದುರ್ಗ ಮುರುಘಮಠದ ಡಾ.ಶಿವಮೂರ್ತಿ ಮುರುಘ ಶರಣರು ಕರೆ ನೀಡಿದರು.
ಹುಳಿಯಾರು ಹೋಬಳಿ ಕೆಂಕೆರೆ ಸಮೀಪದ ಗ್ಯಾರಳ್ಳದಲ್ಲಿ ಮುರುಘಮಠದ ಡಾ.ಶಿವಮೂರ್ತಿ ಮುರುಘ ಶರಣ ಸಮ್ಮುಖದಲ್ಲಿ ವಚನಮಾಂಗಲ್ಯ ವಿವಾಹ ನಡೆಯಿತು |
ಹುಳಿಯಾರು ಹೋಬಳಿ ಕೆಂಕೆರೆ ಸಮೀಪದ ಗ್ಯಾರಳ್ಳದ ಕೆ.ಪಿ.ಮಲ್ಲೇಶ್ ಅವರ ಮನೆಯಲ್ಲಿ ಭಾನುವಾರ ನಡೆದ ರೂಪಾ ಮತ್ತು ನವೀನ್ ಅವರ ವಚನಮಾಂಗಲ್ಯ ಕಲ್ಯಾಣ ಮಹೋತ್ಸವದಲ್ಲಿ ವಧುವರರಿಗೆ ಪ್ರತಿಜ್ಞಾವಿಧಿ ಬೋಧಿಸಿ ಆಶೀರ್ವಚನ ನೀಡಿ ಮಾತನಾಡಿದರು.
ಬಸವಾದಿ ಶರಣರು ತಿಳಿಸಿರುವಂತೆ ಸಮಾಜದಲ್ಲಿ ಎಲ್ಲರೂ ಒಂದೇ ಹೆಣ್ಣು-ಗಂಡು ಇಬ್ಬರೂ ಸಮಾನರೇ ಆಗಿದ್ದು ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ನಡೆಯುವುದೇ ಸಂಸಾರ ಎಂದು ತಿಳಿಸಿದರು. ಜೀವನದಲ್ಲಿ ಎಲ್ಲದಕ್ಕಿಂತ ಮುಖ್ಯ ಉತ್ತಮ ಆರೋಗ್ಯವಾಗಿದ್ದು ನಾವು ನಮ್ಮದೇಹದ ಆರೋಗ್ಯದ ಹೆಚ್ಚು ಗಮನಕೊಡಬೇಕು ಎಂದರಲ್ಲದೆ ಮಾನವರ ನಡುವಿನ ಸಂಬಂಧದಲ್ಲಿ ಬಿರುಕುಂಟಾಗುತ್ತಿದ್ದು ತಂದೆ,ತಾಯಿ,ಮಕ್ಕಳಲ್ಲಿ ಭಿನ್ನಾಭಿಪ್ರಾಯ ಮೂಡಿ ಸಂಸಾರಗಳಲ್ಲಿ ಸುಖಶಾಂತಿ ಕಣ್ಮರೆಯಾಗುತ್ತಿದೆ ಎಂದರು. ಸತಿಪತಿಗಳಿಬ್ಬರು ತಮ್ಮನ್ನು ತಾವು ಅರಿತು ಮತ್ತೊಬ್ಬರಿಗೆ ಆದರ್ಶವಾಗಿ ಬಾಳುವಂತೆ ಆಶೀರ್ವದಿಸಿದರು ಹಾಗೂ ಮುಂದಿನ ದಿನಗಳಲ್ಲಿ ವಚನ ಮಾಂಗಲ್ಯದಂತಹ ಸರಳ ವಿವಾಹಗಳು ಹೆಚ್ಚೆಚ್ಚು ನಡೆಯಲಿ ಎಂದು ಆಶಿಸಿದರು.
ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ ತಮ್ಮ ಉಪನ್ಯಾದಲ್ಲಿ ಇಂದಿನ ಮದುವೆ ಸಮಾರಂಭಗಳಿಗಿಂತ ವಚನ ಮಾಂಗಲ್ಯದ ಮದುವೆ ಭಿನ್ನವಾಗಿದೆ. ವಧುವರರು ಸಂಬಂಧಿಕರ , ಜನರ ಮುಂದೆ ವಚನ ನೀಡುವ ಮೂಲಕ ಮದುವೆ ಆಚರಿಸಿಕೊಳ್ಳುತ್ತಿರುವುದು ಇಂದಿನ ಸಮುದಾಯದರನ್ನು ಇತ್ತ ಸೆಳೆಯುವಂತೆ ಮಾಡಿದೆ ಎಂದರು. ಈ ಮದುವೆಯಲ್ಲಿ ಅರ್ಥವಾಗದ ಮಂತ್ರಗಳ ಬದಲಿಗೆ ಸಭಿಕರೆದುರು ಸರಳವಾಗಿ ಹೆಣ್ಣುಗಂಡು ಪರಸ್ಪರ ಭಿನ್ನಾಭಿಪ್ರಾಯಕ್ಕೆ ಅವಕಾಶ ನೀಡದೆ ಹೊಂದಾಣಿಕೆಯಲ್ಲಿ ಜೀವನ ಸಾಗಿಸುವ ಪ್ರಮಾಣ ಮಾಡುವ ಮೂಲಕ ದಾಂಪತ್ಯಕ್ಕೆ ಕಾಲಿಟ್ಟಿರುವುದು ಶುಭ ಸೂಚಕವಾಗಿದ್ದು ಇದು ಎಲ್ಲರಿಗೂ ಮಾದರಿಯಾಗಲಿ ಎಂದರು.
-------------
ಬಸವಣ್ಣ ರೂಪಿಸಿದ ವಚನಮಾಂಗಲ್ಯ ಸರಳತೆ ಮತ್ತು ವೈಚಾರಿಕತೆಯಿಂದ ಕೂಡಿದ್ದು ಇಂದಿನ ವಿವಾಹ ಸಮಾರಂಭದಲ್ಲಿ ಅದನ್ನು ಅಳವಡಿಸಿಕೊಂಡಿರುವುದು ಮಾದರಿಯಾಗಿದೆ. ವಧುವರರೇ ಆಮಂತ್ರಿತರ ಬಳಿ ಸಾಗಿ ಆಶೀರ್ವಾದ ಪಡೆಯುವುದು ವಚನ ಮಾಂಗಲ್ಯದ ವಿಭಿನ್ನತೆಯಾಗಿದೆ : ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ
------------
ಸರಳ ವಿವಾಹ ನನ್ನಾಸೆಯಾಗಿದ್ದು ಮೌಢ್ಯತೆ ದೂರವಿಟ್ಟು ಸರಳತೆಗೆ ಹತ್ತಿರವಾಗಿದ್ದ ವಚನ ಮಾಂಗಲ್ಯ ನನ್ನ ಕನಸಾಗಿತ್ತು ನನ್ನ ಕನಸು ನನಸು ಮಾಡಿದ ನನ್ನ ತಂದೆತಾಯಿಗೆ ಋಣಿಯಾಗಿರುವೆ : ರೂಪಾ , ವಧು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ