ಹುಳಿಯಾರು ಹೋಬಳಿ ದೊಡ್ಡಬಿದರೆಯ ಗ್ರಾಮದೇವತೆ ಶ್ರೀಕರಿಯಮ್ಮದೇವಿ , ಶ್ರೀ ಪಾತಲಿಂಗೇಶ್ವರಸ್ವಾಮಿ ಹಾಗೂ ಶ್ರೀ ಬೇವಿನಹಳ್ಳಿ ಅಮ್ಮನವರ ಜಾತ್ರಾಮಹೋತ್ಸವ ತಾ. ೫ ರ ಗುರುವಾರದಿಂದ ಪ್ರಾರಂಭಗೊಂಡು , ತಾ.೧೦ರ ಮಂಗಳವಾರದವರೆಗೆ ಆರು ದಿನಗಳ ಕಾಲ ನಡೆಯಲಿದೆ.
ದೊಡ್ಡಬಿದರೆ ಕರಿಯಮ್ಮ. |
ತಾ.೫ರ ಗುರುವಾರ ಅಮ್ಮನವರ ಮದುವಣಗಿತ್ತಿ ಹಾಗೂ ಮಡಿಲಕ್ಕಿ ಸೇವೆ,ತಾ.೬ರ ಶುಕ್ರವಾರ ಬಾನ ಹಾಗೂ ಚಿಕ್ಕಬಿದರೆ ಕರಿಯಮ್ಮ, ಕೋಡಿಹಳ್ಳಿ ಕೊಲ್ಲಾಪುರದಮ್ಮ, ಹುಳಿಯಾರಿನ ಸಣ್ಣದುರ್ಗಮ್ಮದೇವರುಗಳ ಆಗಮನದೊಂದಿಗೆ ಕೂಡು ಭೇಟಿ ನಡೆಯಲಿದೆ. ತಾ.೭ರ ಶನಿವಾರ ಬೆಳಿಗ್ಗೆ ಆರತಿಬಾನ, ಗಂಗಾಪೂಜೆ ನಡೆದು ನಡೆಮುಡಿಯೊಂದಿಗೆ ಅಮ್ಮನವರ ಮೂಲಸ್ಥಾನಕ್ಕೆ ತೆರಳಿ ಅಗ್ನಿಕುಂಡ ಸೇವೆ ನಡೆದು ನಂತರ ಅನ್ನಸಂತರ್ಪಣೆ , ಸಂಜೆ ಸಿಡಿ ಕಾರ್ಯ ನಡೆಯಲಿದೆ.ತಾ.೮ರ ಬೆಳಿಗ್ಗೆ ಧ್ವಜಾರೋಹಣ, ಪಾತಲಿಂಗೇಶ್ವರಸ್ವಾಮಿಗೆ ರುದ್ರಾಭಿಷೇಕ,ನಂತರ ಬಿಂದುಮಾಧವ ಸ್ವಾಮಿಯವರಿಂದ ಶ್ರೀ ಆಂಜನೇಯಸ್ವಾಮಿಗೆ ಕವಚ ಸಮರ್ಪಣೆ ಹಾಗೂ ಮಹಾಮಂಗಳಾರತಿ ಕಾರ್ಯ, ದೋಣಿ ಸೇವೆ, ಸ್ವಾಮಿಯವರ ಮಜ್ಜನ ಸೇವೆ,ಪ್ರಸಾದ ವಿನಿಯೋಗ ನಡೆದು ಅದೇ ದಿನ ರಾತ್ರಿ ಸ್ವಾಮಿಯವರ ಉತ್ಸವ ಜರುಗಲಿದೆ.ತಾ.೯ರ ಸೋಮವಾರ ಸ್ವಾಮಿಯ ವೈಭವಯುತ ದೊಡ್ಡ ರಥೋತ್ಸವ ನಡೆದು ನಂತರ ಓಕಳಿ ಉತ್ಸವ, ತಾ.೧೦ರ ಮಂಗಳವಾರ ಬೇವಿನಹಳ್ಳಿ ಅಮ್ಮನವರ ಬಾನ ನಡೆಯುವ ಮೂಲಕ ೬ ದಿನಗಳ ಜಾತ್ರಾ ಕಾರ್ಯಕ್ಕೆ ತೆರೆ ಬೀಳಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ