ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದಲ್ಲಿ ಶ್ರೀಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿವತಿಯಿಂದ ಶ್ರೀ ಶನೇಶ್ವರಸ್ವಾಮಿಯ ೬೧ನೇ ವರ್ಷದ ಪಾನಕಪನಿವಾರ ಸೇವೆ ಅಂಗವಾಗಿ ಶುಕ್ರವಾರ ಮಧ್ಯಾಹ್ನ ಶನೇಶ್ವರಸ್ವಾಮಿ ಹಾಗೂ ಕಾಳಿಕಾಂಭದೇವಿಯ ಉತ್ಸವ ನಡೆಯಿತು.
ಹುಳಿಯಾರು ಹೋಬಳಿ ಕೆಂಕೆರೆಯಲ್ಲಿ ಶ್ರೀ ಶನೇಶ್ವರಸ್ವಾಮಿಯ ೬೧ನೇ ವರ್ಷದ ಪಾನಕಪನಿವಾರ ಸೇವೆ ಅಂಗವಾಗಿ ಶ್ರೀಶನೇಶ್ವರಸ್ವಾಮಿ ಹಾಗೂ ಕಾಳಿಕಾಂಭದೇವಿಯ ಉತ್ಸವ ನಡೆಸಲಾಯಿತು. |
ಶ್ರೀಶನೇಶ್ವರಸ್ವಾಮಿ ಹಾಗೂ ಗ್ರಾಮದೇವತೆ ಶ್ರೀ ಕಾಳಮ್ಮ ದೇವರುಗಳನ್ನು ಮಂಟಪದಲ್ಲಿ ಕುಳ್ಳಿರಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ಮನೆಯವರು ದೇವರಿಗೆ ಹಣ್ಣುಕಾಯಿ ಮಾಡಿಸುವ ಮೂಲಕ ಆಶೀರ್ವಾದ ಪಡೆದರು. ನಂತರ ಊರಮುಂದಿನ ವಿಶಾಲ ಜಾಗದಲ್ಲಿ ಚಪ್ಪರಹಾಕಿ ನವಗ್ರಹಹೋಮ, ಸಹಸ್ರ ಬಿಲ್ಚಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನಡೆಸಿದರು. ಮಹಾಮಂಗಳಾರತಿಯ ನಂತರ ಭಕ್ತಾರಿಗಾಗಿ ಸಿದ್ದಗೊಳಿಸಿದ್ದ ಬೆಲವತ್ತೆ ಹಣ್ಣಿನ ಪಾನಕ ಹಾಗೂ ಪನಿವಾರವನ್ನು ವಿತರಿಸಿದರು. ಈ ವೇಳೆ ನಾಟಕ ಮಂಡಳಿಯ ಕೆ.ಬಿ.ರಮೇಶ್, ಈಶ್ವರಯ್ಯ,ವರದಯ್ಯ, ಚನ್ನಬಸವಯ್ಯ, ಶರತ್, ಗಂಗಾಧರ್, ಬಾಬು, ಕಂಠೇಶ್,ಕೊಟ್ಟುರಯ್ಯ, ವಿರೂಪಾಕ್ಷ, ಶೇಖರಪ್ಪ, ಯುವರಾಜ,ಬಳ್ಳಾರಿಗಂಗಣ್ಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಯ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ