ಗೃಹಿಣಿಯೊಬ್ಬಳು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ಮಾರುತಿನಗರ ಬಡಾವಣೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡಿಕೊಂಡ ಗೃಹಿಣಿಯನ್ನು ಫರಿದಾಭಾನು(೨೮) ಎನ್ನಲಾಗಿದ್ದು, ಈಕೆಗೆ ಅಪೆಂಡಿಕ್ಸ್ ಇದ್ದು ಅದರಿಂದ ಉಂಟಾಗುತ್ತಿದ್ದ ನೋವನ್ನು ತಳಲಾರದೆ ಭಾನುವಾರ ರಾತ್ರಿ ವಿಷ ಸೇವಿಸಿದ್ದಾಳೆ. ವಿಷಸೇವಿಸಿದ ಈಕೆಯನ್ನು ಚಿ.ನಾ.ಹಳ್ಳಿ ಆಸ್ಪತ್ರೆಗೆ ಕರೆದೊಯ್ದರಾದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದು, ಈಕೆಗೆ ಪತಿ, ಮಗಳು,ಮಗ ಇದ್ದಾನೆ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ