ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದವತಿಯಿಂದ ಕರೆ ನೀಡಿರುವ ಗ್ರಾಮೀಣ ಅಂಚೆ ನೌಕರರ ಮುಷ್ಕರದಿಂದಾಗಿ ಹೋಬಳಿ ಕೇಂದ್ರದಿಂದ ಗ್ರಾಮೀಣಭಾಗಕ್ಕೆ ತಲುಪಬೇಕಾಗಿದ್ದ ಅಂಚೆ ಬ್ಯಾಗ್ ಗಳು ವಿಲೆವಾರಿಯಾಗದೆ ಹೋಬಳಿಯ ಮುಖ್ಯ ಅಂಚೆ ಕಛೇರಿಯಲ್ಲೇ ಪೆಂಡಿಂಗ್ ಉಳಿಯುವಂತಾಗಿದೆ.
ಅಂಚೆ ನೌಕರರ ಮುಷ್ಕರದ ಭಿತ್ತಿಪತ್ರ. |
ತಾ.೧೦ರ ಮಂಗಳವಾರದಿಂದ ಪ್ರಾರಂಭಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಹೋಬಳಿಯ ದಸೂಡಿ , ದಬ್ಬಗುಂಟೆ, ಬೆಳ್ಳಾರ,ಹೊಯ್ಸಳಕಟ್ಟೆ, ತಿರುಮಲಾಪುರ, ಕೆಂಕೆರೆ,ಗಾಣಧಾಳು, ಯಳನಡು ಅಂಚೆಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನೌಕರರು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದು, ಅಂಚೆಕಛೇರಿಯ ಬಾಗಿಲು ಮುಚ್ಚಿದ್ದಾರೆ. ಹುಳಿಯಾರಿನ ಅಂಚೆಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೋಸ್ಟ್ ಮ್ಯಾನ್ ಹಾಗೂ ಈಡಿ ಪ್ಯಾಕರ್ ಸಹ ಮುಷ್ಕರಕ್ಕೆ ತೆರಳಿದ್ದು ಹಳ್ಳಿಗಳಿಗೆ ಹೋಗಬೇಕಾಗಿದ್ದ ಅಂಚೆ ಬ್ಯಾಗ್ ಗಳು ಹುಳಿಯಾರು ಅಂಚೆಕಛೆರಿಯಲ್ಲೇ ಉಳಿಯುವಂತಾಗಿದೆ ಎಂದು ಪೋಸ್ಟ್ ಮಾಸ್ಟರ್ ಲತಾ ತಿಳಿಸಿದರು.
ಗ್ರಾಮೀಣ ಭಾಗದ ಅಂಚೆಕಛೇರಿಗಳಲ್ಲಿ ಕಳೆದ ಕೆಲ ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಜಿಡಿಎಸ್ ನೌಕರರನ್ನು ಖಾಯಂಗೊಳಿಸುವಂತೆ, ೭ ನೇ ವೇತನ ಅಯೋಗದ ರಚನೆಗೆ ನಿವೃತ್ತ ನ್ಯಾಯಮೂರ್ತಿಗಳನ್ನು ನೇಮಿಸುವಂತೆ , ಟಿ.ಆರ್.ಸಿ ವರದಿಯಂತೆ ಅಂಚೆ ಇಲಾಖೆಯನ್ನು ಕಾರ್ಪೋರೇಟ್ ಮಾಡುವ ನಿರ್ಧಾರವನ್ನು ಕೈಬಿಡುವಂತೆ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟು ತಮ್ಮ ಮುಷ್ಕರ ನಡೆಸುತ್ತಿದ್ದಾರೆ.
-------------------
ಕಳೆದ ೩೦-೪೦ ವರ್ಷದಿಂದ ಅಂಚೆ ಇಲಾಖೆಯಲ್ಲಿ ಪೋಸ್ಟ್ ಮಾಸ್ಟರ್ ಹಾಗೂ ಪೋಸ್ಟ್ ಮ್ಯಾನ್ ಆಗಿ ಹಲವಾರು ಮಂದಿ ಕಾರ್ಯ ನಿರ್ವಹಿಸುತ್ತಿದ್ದು ಇದುವರೆಗೂ ನಮನ್ನು ಖಾಯಂ ಮಾಡಿಲ್ಲ ಹಾಗೂ ದಿನಗೂಲಿಯಂತೆ ಸಂಬಳ ನೀಡುತ್ತಿದ್ದಾರೆ : ಭದ್ರೇಶ್ , ಕೆಂಕೆರೆ ಪೋಸ್ಟ್ ಮ್ಯಾನ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ