ಎಲ್ಲಾ ಗ್ರಾ.ಪಂ. ಹಾಗೂ ತಾಪಂ. ಗಳಲ್ಲಿ ವಾರದ ಏಳು ದಿನವೂ ತ್ರೀವರ್ಣ ಧ್ವಜ ಬೆಳಿಗ್ಗಿನಿಂದ ಸೂರ್ಯಾಸ್ತದವರೆಗೆ ಹಾರಬೇಕೆನ್ನುವ ನಿಯಮ ಮಾಡಲಾಗಿದೆ. ಇದರ ನಿರ್ವಹಣೆ ಮಾಡುವವರಿಗೆ ಪ್ರತಿ ದಿನ ೩೦ರೂ ಭತ್ಯೆ ಸಹ ನೀಡಲಾಗುತ್ತಿದೆ. ಇದರ ಜವಬ್ದಾರಿ ಹೊತ್ತವರು ರಾಷ್ಟ್ರಧ್ವಜದ ಬಗ್ಗೆ ಸರಿಯಾಗಿ ನಿಗಾವಹಿಸದಿದ್ದಲ್ಲಿ ಎಂತಹ ಅವಮಾನಕ್ಕೆ ಕಾರಣವಾಗುತ್ತದೆ ಎನ್ನುವುದಕ್ಕೆ ಈ ಚಿತ್ರವನ್ನು ನೋಡಿದರೆ ಕಾಣುತ್ತದೆ.
ಹುಳಿಯಾರು ಹೋಬಳಿ ದೊಡ್ಡಬಿದರೆ ಗ್ರಾ.ಪಂ.ಮುಂದೆ ಅರ್ಧದಲ್ಲಿ ಹಾರಾಡುತ್ತಿದ್ದ ಬಾವುಟ.
|
ಬಾನೆತ್ತರಕ್ಕೆ ಹಾರಬೇಕಾದ ರಾಷ್ಟ್ರಧ್ವಜ ಅರ್ಧಮಟ್ಟಕ್ಕೆ ಇಳಿಸುವುದು ರಾಷ್ಟ್ರದ ಅಥವಾ ರಾಜ್ಯದ ಅತಿಗಣ್ಯವ್ಯಕ್ತಿಯ ಶೋಕಾಚರಣೆ ಸಂದರ್ಭದಲ್ಲಿ ಮಾತ್ರ . ಇಂತಹ ಅರ್ಧಮಟ್ಟದ ಬಾವುಟ ಭಾನುವಾರ ಮಧ್ಯಾಹ್ನದ ಸಮಯದಲ್ಲಿ ಹೋಬಳಿಯ ದೊಡ್ಡಬಿದರೆ ಗ್ರಾ.ಪಂ.ಯಲ್ಲಿ ಕಂಡುಬಂದು ಹಲವು ಅನುಮಾನಗಳಿಗೆ ಕಾರಣವಾಯಿತು. ಭಾನುವಾರವಾದ್ದರಿಂದ ಪಂಚಾಯ್ತಿಗೆ ರಜಾ ದಿನವಾಗಿದ್ದು ಈ ಬಗ್ಗೆ ಯಾರು ಗಮನ ಹರಿಸಿರಲಿಲ್ಲ. ಹೆದ್ದಾರಿ ಪಕ್ಕದಲ್ಲಿ ಪಂಚಾಯ್ತಿ ಇರುವುದರಿಂದ ಅರ್ಧ ಮಟ್ಟದಲ್ಲಿ ಹಾರುತ್ತಿದ್ದ ಬಾವುಟ ಪಂಚಾಯ್ತಿಯವರ ನಿರ್ಲಕ್ಷವನ್ನು ಎದ್ದುಕಾಣುವಂತೆ ಮಾಡಿತ್ತು.
ಈಗಾಗಲೇ ಬೇಸಿಗೆಯು ಕೆಂಡಕಾರುತ್ತಿದ್ದು ಇದರ ಸುಡು ಬಿಸಿಲಿಗೆ ಬಾವುಟಗಳು ಬಣ್ಣಕಳೆದುಕೊಳ್ಳುತ್ತಿದ್ದು ಇಂತಹ ಬಾವುಟಗಳು ಕೆಲವೊಂದು ಪಂಚಾಯ್ತಿಯಲ್ಲಿ ನಿತ್ಯ ಹಾರಾಡುತ್ತಿವೆ. ಈ ಬಗ್ಗೆ ತುರ್ತು ಗಮನ ಹರಿಸುವ ಅವಶ್ಯಕತೆಯಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ