ಪ್ರಸ್ತುತದಲ್ಲಿ ವಿಭಿನ್ನ ಚಲನಚಿತ್ರಗಳು ಹೆಚ್ಚೆಚ್ಚು ಬಿಡುಗಡೆಯಾಗುತ್ತಿದ್ದು ಚಲನಚಿತ್ರಗಳನ್ನು ನೋಡಲು ಜನ ಮುಗಿಬೀಳುತ್ತಾರೆ ಹೊರತು ಪೌರಾಣಿಕ ಹಿನ್ನಲೆಯನ್ನು ಪ್ರತಿಬಿಂಬಿಸುವ ನಾಟಕಗಳನ್ನು ವೀಕ್ಷಿಸಲು ಪ್ರೇಕ್ಷಕರು ಬರುತ್ತಿಲ್ಲ ಹಾಗೂ ಪ್ರೋತ್ಸಾಹ ನೀಡುವವರ ಸಂಖ್ಯೆಯೂ ವಿರಳವಾಗಿದೆಯೆಂದು ಸಹಾಯಕ ಇಂಜಿನಿಯರ್ ಟಿ.ಎಲ್.ಲೋಕೇಶ್ ವಿಷಾಧಿಸಿದರು.
ಹುಳಿಯಾರು ಹೋಬಳಿ ತೊರೆಮನೆಯ ಶ್ರೀ ಅಂತರಗಟ್ಟೆ ಕರಿಯಮ್ಮದೇವಿ ಕೃಪಾಪೋಷಿತ ನಾಟಕ ಮಂಡಳಿವತಿಯ ಕಲಾವಿದರು ಅಭಿನಯಿಸಿದ ಶ್ರೀರಾಮಪಟ್ಟಾಭಿಷೇಕ ಪೌರಾಣಿಕ ನಾಟಕದ ದೃಶ್ಯ. |
ಹುಳಿಯಾರು ಹೋಬಳಿ ತೊರೆಮನೆಯಲ್ಲಿ ಶ್ರೀ ಅಂತರಗಟ್ಟೆ ಕರಿಯಮ್ಮದೇವಿ ಕೃಪಾಪೋಷಿತ ನಾಟಕ ಮಂಡಳಿವತಿಯಿಂದ ಅಯೋಜಿಸಿದ್ದ ಶ್ರೀರಾಮಪಟ್ಟಾಭಿಷೇಕ ಅಥವಾ ಪಾತಾಳಹೋಮ ಎಂಬ ಪೌರಾಣಿಕ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೌರಾಣಿಕ ನಾಟಕಗಳು ಸಾಮಾಜಿಕ ಮೌಲ್ಯಗಳನ್ನು ತಿಳಿಸುವ ಹಾಗೂ ಹತ್ತಾರು ವರ್ಷಗಳ ಹಿಂದೆ ನಡೆದ ಹಲವು ಐತಿಹಾಸಿಕ ಘಟನೆಗಳನ್ನು ಪ್ರಚುರಪಡೆಸುವಂತವಾಗಿವೆ ಎಂದರು. ಈ ಹಿಂದೆ ಪ್ರತಿಯೊಂದು ಹಳ್ಳಿಗಳಲ್ಲೂ ನಾಟಕ ಮಂಡಲಿ ಕಟ್ಟಿಕೊಂಡು, ನಾಟಕ ಅಭಿನಯಿಸಲು ಜನ ಹೆಚ್ಚು ಮುಂದುಬರುತ್ತಿದ್ದರು ಆದರೆ ಇದೀಗ ನಾಟಕಗಳನ್ನು ಕಲಿಯಲು ಯುವಪೀಳಿಗೆ ಮುಂದೆಬಾರದೆ ನಾಟಕ ಪ್ರದರ್ಶನ ಕ್ಷಿಣಿಸುವಂತಾಗಿದೆ ಎಂದರು.
ಈ ವೇಳೆ ಭಾಗವತರಾದ ಹೊಸಹಳ್ಳಿ ನಾಗೋಜಿರಾವ್, ಕುರುಬರಹಳ್ಳಿ ತಿಮ್ಮಯ್ಯ,ಸ್ಟೇಜ್ ಮ್ಯಾನೇಜರ್ ದಾನಪ್ಪ,ಗ್ರಾ.ಪಂ.ಸದಸ್ಯೆ ರಾಜಮ್ಮರೇವಣ್ಣ, ದಾನಿಗಳಾದ ಲಕ್ಕಪ್ಪ , ರಂಗಪ್ಪ, ಪಾಂಡುರಂಗಯ್ಯ, ನೀಲಪ್ಪ, ರಾಮಯ್ಯ, ಮೃದಂಗವಾದಕ ಸೋಮಯ್ಯ ಸೇರಿದಂತೆ ನಾಟಕದ ಪಾತ್ರಧಾರಿಗಳು ಹಾಗೂ ಸುತ್ತಮುತ್ತಲ ಸಾರ್ವಜನಿಕರು ಹಾಜರಿದ್ದು ನಾಟಕವನ್ನು ವೀಕ್ಷಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ