ತಾಲ್ಲೂಕಿನ ವಿವಿಧ ಭಾಗದಲ್ಲಿ ಕಳೆದ ವಾರದಿಂದ ಸಂಚರಿಸುತ್ತಾ ಜನರಲ್ಲಿ ಆತಂಕ ಉಂಟುಮಾಡಿದ್ದ ಕಾಡಾನೆಗಳ ಹಿಂಡು ಶನಿವಾರ ರಾತ್ರಿ ಹೋಬಳಿಯ ಬೆಳ್ಳಾರ ಆರಣ್ಯ ಪ್ರದೇಶಕ್ಕೆ ಕಂಡು ಬಂದಿದ್ದು ಈ ಭಾಗದ ರೈತರ ಹೊಲಗಳ ಜಮೀನಿನಲ್ಲಿದ್ದ ಬೆಳೆ ಹಾನಿಯುಂಟುಮಾಡಿವೆ.
ಕಾವೇರಿ ತೀರದ ಆರಣ್ಯಪ್ರದೇಶದಿಂದ ಹೊರಟ ಕಾಡಾನೆಗಳ ಹಿಂಡು ಜಿಲ್ಲೆಯ ನಾನಾ ಭಾಗದಲ್ಲಿ ಮೂರು ತಂಡಗಳಾಗಿ ತೊಂದರೆಕೊಡುತ್ತಿವೆ. ಆ ಪೈಕಿ ೪ ಆನೆಗಳ ಒಂದು ತಂಡ ಚಿಕ್ಕನಾಯಕನಹಳ್ಳಿ ಭಾಗದಲ್ಲಿ ಸಂಚರಿಸುತ್ತಿವೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಘಂಟೇನಹಳ್ಳಿ ಭಾಗದಲ್ಲಿ ಕಾಣಿಸಿಕೊಂಡ ೪ ಆನೆಗಳ ತಂಡ ಶುಕ್ರವಾರ ರಾತ್ರಿ ಬುಕ್ಕಾಪಟ್ಟಣ ಆರಣ್ಯ ಪ್ರದೇಶ ದಾಟಿ ಶನಿವಾರ ರಾತ್ರಿ ಬೆಳ್ಳಾರ ಆರಣ್ಯಪ್ರದೇಶದಲ್ಲಿ ಬೀಡು ಬಿಟ್ಟು ಸುತ್ತಮುತ್ತಲ ರೈತ ಜಮೀನಿಗೆ ಲಗ್ಗೆ ಇಟ್ಟಿವೆ. ಬೆಳ್ಳಾರದ ರಾಮಣ್ಣ ಹಾಗೂ ಅಡವಿಕರಿಯಪ್ಪ ಅವರ ಹೊಲ, ತೋಟದಲ್ಲಿನ ಮಾವು, ಹಲಸು, ಸಪೋಟ, ಅಡಿಕೆ ಸಸಿ, ಮೆಕ್ಕೆಜೋಳ ಸೇರಿದಂತೆ ಇನ್ನಿತರ ಬೆಳೆಗಳಿಗೆ ಹಾನಿಯುಂಟುಮಾಡಿವೆ. ಸಾಮಾನ್ಯವಾಗಿ ಮುಂದುವರಿದು ಹಿರಿಯೂರು ಅರಣ್ಯ ಪ್ರದೇಶಕ್ಕೆ ಹೋಗಬೇಕಾಗಿದ್ದ ಆನೆಯಗಳು ತಮ್ಮ ದಿಕ್ಕನ್ನು ಬದಲಿಸಿ ಮತ್ತೆ ಘಂಟೇನಹಳ್ಳಿ ಆರಣ್ಯ ಪ್ರದೇಶಕ್ಕೆ ಹಿಂದಿರುದಿವೆ.
ಆನೆಗಳು ರಾತ್ರಿವೇಳೆ ತಮ್ಮ ಸಂಚಾರ ನಡೆಸುತ್ತಿದ್ದು ಅವು ಎತ್ತ ಸಾಗುತ್ತವೆ ಎಂಬುದರ ಖಚಿತ ಮಾಹಿತಿ ದೊರೆಯುವುದಿಲ್ಲ ಅವು ಯಾವ ಕಡೆ ಸಾಗುತ್ತವೆ ಎಂಬುದರ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಬುಕ್ಕಾಪಟ್ಟಣ ವಲಯ ಅರಣ್ಯಾಧಿಕಾರಿ ಶಾಂತರಾಜಯ್ಯ.ತಿಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ