ಹುಳಿಯಾರು ಪಟ್ಟಣದ ಶ್ರಿಆಂಜನೇಯಸ್ವಾಮಿ ದೇವಾಲಯದಲ್ಲಿ ೬ನೇ ವರ್ಷದ ರಾಮನವಮಿ ಅಂಗವಾಗಿ ಜೈ ಮಾರುತಿ ಯುವಕ ಸೇವಾ ಛಾರಿಟಬಲ್ ಟ್ರಸ್ಟ್ ಹಾಗೂ ಆಂಜನೇಯ ಜೀರ್ಣೋದ್ಧಾರ ಸಮಿತಿವತಿಯಿಂದ ಇದೇ ಪ್ರಥಮಬಾರಿಗೆ ಶುಕ್ರವಾರ ಸಂಜೆ ಶ್ರೀರಾಮಭಜನೋತ್ಸವ ಕಾರ್ಯಕ್ರಮ ನಡೆಸಲಾಯಿತು.
ರಾಮನವಮಿ ಅಂಗವಾಗಿ ಹುಳಿಯಾರಿನ ಆಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀರಾಮಭಜನೋತ್ಸವದಲ್ಲಿ ಪ್ರಶಸ್ತಿಪತ್ರದೊಂದಿಗೆ ಮುಖ್ಯಪ್ರಾಣ ಭಜನಾ ಮಂಡಳಿ. |
ಈ ಕಾರ್ಯಕ್ರಮದಲ್ಲಿ ಪಟ್ಟಣದ ಮುಖ್ಯಪ್ರಾಣ ಭಜನಾ ಮಂಡಳಿ, ವೃಷಭಾದ್ರಿ,ಆನಂದಾದ್ರಿ, ಗರುಡಾದ್ರಿ, ವೆಂಕಟಾದ್ರಿ,ಶೇಷಾದ್ರಿ,ಅಕ್ಕಮಹಾದೇವಿ, ಅಂಜನಾದ್ರಿ ಭಜನಾ ಮಂದಳಿ, ಕೆಂಕೆರೆಯ ಶ್ರೀರಂಗನಾಥಸ್ವಾಮಿ ಹಾಗೂ ಶ್ರೀಕಾಳಿಕಾಂಬ ಭಜನಾ ಮಂಡಳಿಯವರು ಆಗಮಿಸಿದ್ದು ಶ್ರೀರಾಮನ ಹಾಗೂ ಆಂಜನೇಯಸ್ವಾಮಿ ಕುರಿತ ಗೀತೆಗಳನ್ನು ಗಾಯನ ಮಾಡಿದರು. ತಲಾ ಎರಡೆರಡು ತಂಡದವರು ನಾಲ್ಕೈದು ಗಂಟೆಗಳ ಕಾಲ ಸುಧೀರ್ಘವಾಗಿ ರಾಮಭಜನೆ ಮಾಡಿದರು. ಆಗಮಿಸಿದ್ದ ಭಜನಾ ಮಂಡಳಿಯ ಸದಸ್ಯರುಗಳಿಗೆ ಟ್ರಸ್ಟ್ ವತಿಯಿಂದ ನೆನಪಿನ ಕಾಣಿಕ,ಪ್ರಶಸ್ತಿ ಪತ್ರವಿತರಿಸಲಾಯಿತು. ಈ ವೇಳೆ ಟ್ರಸ್ಟ್ ನ ಗೌರವಾಧ್ಯಕ್ಷ ಅಶೋಕ್ ಬಾಬು, ಅಧ್ಯಕ್ಷ ಚನ್ನಬಸವಯ್ಯ,ಉಪಾಧ್ಯಕ್ಷ ಮಂಜುನಾಥ್, ದಯಾನಂದ್, ಸತೀಶ್,ನರಸಿಂಹಮುರ್ತಿ,ಲೋಕೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ