ಸಿನಿಮಾ ಹಾಗೂ ಕಿರುತೆರೆ ಕಲಾವಿದರು ವಿವಿಧ ಪಾತ್ರಗಳಲ್ಲಿ ಅಭಿನಯಿಸಿದರೂ ಸಹ ಅವರ ಬದುಕು ಕಟ್ಟಿ ಕೊಡುವಲ್ಲಿ ಅಭಿಮಾನಿಗಳ ಪಾತ್ರ ಮಹತ್ವದಾಗಿದ್ದು ಅಭಿಮಾನಿಗಳಿದ್ದರೆ ನಾವು ಎಂದು ಕಿರುತೆರೆ ಕಲಾವಿದೆ ವೀಣಾ ಬಾಲಾಜಿ ತಿಳಿಸಿದರು.
ಹುಳಿಯಾರಿನ ಆಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀರಾಮನವಮಿ ಅಂಗವಾಗಿ ಅಯೋಜಿಸಿದ್ದ ರಸಸಂಜೆ ಕಾರ್ಯಕ್ರಮದಲ್ಲಿ ಕಿರುತೆರೆ ನಟಿ ವೀಣಾಬಾಲಾಜಿ ಮಾತನಾಡಿದರು. |
ಹುಳಿಯಾರಿನ ಶ್ರೀಆಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀರಾಮನವಮಿ ಅಂಗವಾಗಿ ಜೈಮಾರುತಿ ಯುವಕ ಸೇವಾ ಛಾರಿಟಬಲ್ ಟ್ರಸ್ಟ್ ಹಾಗೂ ಜೀರ್ಣೋದ್ಧಾರ ಸಮಿತಿಯವರು ಅಯೋಜಿಸಿದ್ದ ಬೆಂಗಳೂರಿನ ನಟರಾಜ್ ಎಂಟರ್ ಟ್ರೈನರ್ಸ್ ಅವರ ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಗರಪ್ರದೇಶದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಜನಸೇರುವುದು ಮಾಮೂಲಿಯಾಗಿದ್ದು, ಹುಳಿಯಾರಿನಂತಹ ಗ್ರಾಮೀಣ ಭಾಗದಲ್ಲೂ ಸಹ ಸಾಕಷ್ಟು ಜನ ಕಿರುತೆರೆ ಕಲಾವಿದರ ಮೇಲೆ ಅಭಿಮಾನವಿಟ್ಟು ಕಾರ್ಯಕ್ರಮಕ್ಕೆ ಆಗಮಿಸಿರುವುದು ಸಂತಸವನ್ನುಂಟು ಮಾಡಿದೆ ಎಂದರು. ನಿಮ್ಮಗಳ ಅಭಿಮಾನ ಕಲಾವಿದರ ಮೇಲೆ ಇದೇ ರೀತಿ ಸದಾ ಇರಲಿ ಎಂದು ಅಶಿಸಿದರು.
ಈ ವೇಳೆ ಕಿರುತೆರೆ ಕಲಾವಿದರುಗಳಾದ ರೂಪೇಶ್ ಕುಮಾರ್,ಚಿತ್ರಾ ಮೈಸೂರು,ಪ್ರಿಯಾ ಕೆಸರೆ,ಚಲನಚಿತ್ರಗಳಲ್ಲಿ ಖಳನಟರಾಗಿರುವ ನಟರಾಜ್ (ಸಂತ), ಹುಳಿಯಾರಿನ ಗೌಡಿರಂಗನಾಥ್ ಉಪಸ್ಥಿತರಿದ್ದು ಸನ್ಮಾನ ಸ್ವೀಕರಿಸಿದರು. ಜೈಮಾರುತಿ ಸಂಘದ ಅಶೋಕ್ ಬಾಬು,ಚನ್ನಬಸವಯ್ಯ,ದಯಾನಂದ್, ರಾಜು,ನರಸಿಂಹಮೂರ್ತಿ,ಪುಟ್ಟರಾಜು,ಲೋಕೇಶ್,ಸತೀಶ್,ಮಂಜುನಾಥ್ ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ