ಹುಳಿಯಾರು ಪಟ್ಟಣದಿಂದ ಪೋಚಕಟ್ಟೆ,ದೊಡ್ಡಬಿದರೆ ಮಾರ್ಗವಾಗಿ ನಡೆಯುತ್ತಿರುವ ರಸ್ತೆ ಕಾಮಗಾರಿಯಲ್ಲಿ ರಸ್ತೆ ಬದಿಯಲ್ಲಿ ರೋಲ್ ಮಾಡದೆ ಹಾಗೆಯೇ ಮಣ್ಣು ಸುರಿದು ದ್ವಿಚಕ್ರವಾಹನ ಸವಾರರಿಗೆ ಕಂಟಕಪ್ರಾಯವಾಗಿತ್ತು. ಈ ಸಮಸ್ಯೆಯ ಬಗ್ಗೆ ಶನಿವಾರದ ಕನ್ನಡಪ್ರಭದಲ್ಲಿ ಬೆಳಕುಚೆಲ್ಲಿದ್ದನ್ನು ಅರಿತ ಗುತ್ತಿಗೆದಾರರು ಆ ಕೂಡಲೇ ರೋಲರ್ ಮೂಲಕ ಸರಿಪಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಹುಳಿಯಾರು-ಚಿ.ನಾ.ಹಳ್ಳಿ ಮಾರ್ಗದ ರಸ್ತೆಬದಿಯಲ್ಲಿ ರೋಲರ್ ಮೂಲಕ ಮಣ್ಣು ಬಿಗಿ ಮಾಡುತ್ತಿರುವುದು. |
ಕಳೆದೊಂದುವಾರದಿಂದ ಕೆ-ಶಿಪ್ ಮೂಲಕ ನಡೆಯುತ್ತಿರುವ ರಸ್ತೆ ಕಾಮಗಾರಿ ಸರಿಯಾಗಿ ನಿರ್ವಹಿಸದೆ ಸಬೂಬು ಹೇಳಿಕೊಂಡು ತಮ್ಮ ಕಾರ್ಯ ಮುಂದುವರೆಸಿದ್ದರು. ರಸ್ತೆ ಬದಿಗೆ ಮಣ್ಣು ಹಾಕುತ್ತಿದ್ದರೇ ಹೊರತು ಡೋಸ್ ಮಾಡುವುದಾಗಲಿ, ರೋಲರ್ ಮೂಲ ಮಣ್ಣು ಬಿಗಿ ಮಾಡುವುದಾಗಲಿ ಮಾಡಿರಲಿಲ್ಲ. ಇದೀಗ ಪತ್ರಿಕೆಯಲ್ಲಿ ಬಂದ ನಂತರ ಎಚ್ಚೆತ್ತು ಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಟ್ಯಾಂಕರ್ ಮೂಲಕ ನೀರು ಹಾಯಿಸಿ ರೋಲ್ ಮಾಡಿದಲ್ಲಿ ಧೂಳಿನ ಸಮಸ್ಯೆಯೂ ಕಾಡದೆ ಮಣ್ಣು ಬಿಗಿಯಾಲು ಸಹಕಾರಿಯಾಗುತ್ತಿತ್ತು. ಈ ಬಗ್ಗೆ ಗಮನ ಹರಿಸಬೇಕೆಂದು ಒತ್ತಾಯ ಕೇಳಿಬಂದಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ