ಹುಳಿಯಾರು ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ರಾಸುಗಳಿಗೆ ಮಾರಣಾಂತಿಕವಾಗಿ ಕಾಡುತ್ತಿರುವ ಕಾಲುಬಾಯಿ ಜ್ವರದ ರೋಗವನ್ನು ನಿಯಂತ್ರಿಸಲು ರಾಸುಗಳಿಗೆ ಉಚಿತ ಕಾಲುಬಾಯಿ ಜ್ವರ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಹುಳಿಯಾರು ಪಶುಆಸ್ಪತ್ರೆಯ ಸಹಾಯಕ ನಿರ್ದೇಶಕ ಸುಜಯ್ ತಿಳಿಸಿದರು. ಹೋಬಳಿಯ ಗಾಣಧಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮ ನಡೆಯುತ್ತಿದೆ.
ಹುಳಿಯಾರು ಹೋಬಳಿಯ ರಂಗನಕೆರೆಯಲ್ಲಿ ನಡೆದ ಲಸಿಕಾ ಕಾರ್ಯಕ್ರಮ. |
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಉಚಿತವಾಗಿ ಹಮ್ಮಿಕೊಂಡಿರುವ ಲಸಿಕಾ ಕಾರ್ಯಕ್ರಮ ಕಳೆದ ೯ ರಿಂದ ನಡೆಯುತ್ತಿದ್ದು ಮುಂದಿನ ೨೫ರ ವರೆಗೆ ನಿಗದಿ ಪಡಿಸಿದ ದಿನದಂದು ಅಯಾ ಗ್ರಾಮಗಳಲ್ಲಿ ನಡೆಯಲಿದೆ. ಈಗಾಗಲೇ ಗಾಣಧಾಳು, ರಂಗನಕೆರೆ,ವೆಂಕಟಭೋವಿಹಟ್ಟಿ,ಮೇಲನಹಳ್ಳಿ, ಗುರುವಾಪುರ ಮುಂತಾದ ಗ್ರಾಮಗಳಲ್ಲಿ ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಈ ರೋಗ ರಾಸುಗಳಿಗೆ ಹರಡದಂತೆ ರೈತರು ಮುನ್ನೆಚ್ಚರಿಕೆ ವಹಿಸುವ ಮೂಲಕ ತಕ್ಷಣ ಸ್ಥಳೀಯ ಪಶು ವೈದ್ಯರಿಂದ ರೋಗ ನಿರೋಧಕ ಲಸಿಕೆ ಹಾಕಿಸುವಂತೆ ಹಾಗೂ ರೈತರು ತಮ್ಮ ರಾಸುಗಳಿಗೆ ಲಸಿಕೆ ಹಾಕಿಸುವ ಮೂಲಕ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಪಶುವೈದ್ಯಾಧಿಕಾರಿ ನೇತ್ರಾವತಿ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ