ಹುಳಿಯಾರು ಹೋಬಳಿ ದೊಡ್ಡಬಿದರೆ ಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವ ಶುಕ್ರವಾರದಂದು ಮದುವಣಗಿತ್ತಿ ಕಾರ್ಯ ಹಾಗೂ ಮಡಿಲಕ್ಕಿ ಕಾರ್ಯದೊಂದಿಗೆ ಚಾಲನೆಗೊಂಡಿದ್ದು, ನಾಳೆ(ತಾ.೭) ಶನಿವಾರ ಅಮ್ಮನವರ ಸಿಡಿಕಾರ್ಯ ನಡೆಯಲಿದೆ.
ಶನಿವಾರ ಮುಂಜಾನೆ ದೊಡ್ಡಬಿದರೆ, ಕೋಡಿಹಳ್ಳಿ, ದಾಸಣ್ಣನಹಟ್ಟಿ ಗ್ರಾಮಸ್ಥರಿಂದ ಆರತಿಬಾನ, ಗಂಗಾಪೂಜೆ ನಡೆದು ನಡೆಮುಡಿಯೊಂದಿಗೆ ಅಮ್ಮನವರನ್ನು ಮೂಲಸ್ಥಾನ ಬಾರೆ ಹತ್ತಿರಕ್ಕೆ ಕರೆದೊಯ್ಯಲಾಗುತ್ತದೆ. ನಂತರ ಅಗ್ನಿಕುಂಡ ಕಾರ್ಯ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಇದೇ ದಿನ ಸಂಜೆ ಸಿಡಿ ಕಾರ್ಯ ನಡೆಯಲಿದ್ದು ನಂತರ ದೊಡ್ಡಬಿದರೆಯ ಡಿ.ಎಸ್.ಬಸವರಾಜು ಸಂಗಡಿಗರಿಂದ ಕರಪಾಲ ಮೇಳ ಅಯೋಜಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವಂತೆ ದೇವಾಲಯ ಸಮಿತಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ