ಹುಳಿಯಾರು ಪಟ್ಟಣದ ಮಾರುತಿನಗರದ ಶ್ರೀಆಂಜನೇಯಸ್ವಾಮಿ ದೇವಾಲಯದಲ್ಲಿ ಜೈಮಾರುತಿ ಯುವಕ ಸೇವಾ ಛಾರಿಟಬಲ್ ಟ್ರಸ್ಟ್, ಆಂಜನೇಸ್ವಾಮಿ ಜೀರ್ಣೋದ್ಧಾರ ಸಮಿತಿ ಹಾಗೂ ಭಕ್ತಾಧಿಗಳ ಸಹಯೋಗದಲ್ಲಿ ೨ ದಿನನಗಳ ಕಾಲ ೬ನೇ ವರ್ಷದ ಶ್ರೀರಾಮನವಮಿ ಆಚರಣೆ ನಡೆಯಲಿದೆ.
ಇದರ ಅಂಗವಾಗಿ ಶ್ರೀಕ್ಷೇತ್ರ ಬೆಲಗೂರಿನ ಬಿಂಧುಮಾಧವ ಸ್ವಾಮೀಜಿ ಹಾಗೂ ಹೊಸದುರ್ಗ ಕನಕಗುರುಪೀಠ ಶಾಖಾಮಠದ ಶ್ರೀಈಶ್ವರಾನಂದಪುರಿ ಸ್ವಾಮೀಜಿ ಅವರುಗಳ ಸಾನಿಧ್ಯದಲ್ಲಿ (ತಾ.೨೭) ಶುಕ್ರವಾರ ಸಂಜೆ ೬ ಗಂಟೆಗೆ ಪಟ್ಟಣದ ಎಲ್ಲಾ ಭಜನಾ ಮಂಡಳಿಯವರಿಂದ ಶ್ರೀರಾಮಭಜನೋತ್ಸವ ನಡೆಯಲಿದೆ
ತಾ.೨೮ರ ಶನಿವಾರ ಬೆಳಿಗ್ಗೆ ಆಂಜನೇಯಸ್ವಾಮಿಗೆ ಅಭಿಷೇಕ ನಡೆದು ನಂತರ ಗ್ರಾಮದೇವತೆಗಳಾದ ಹುಳಿಯಾರಮ್ಮ, ದುರ್ಗಮ್ಮ ಹಾಗೂ ಲಿಂಗಪ್ಪನಪಾಳ್ಯದ ಶ್ರೀರಾಮದೇವರುಗಳ ಆಗಮನದೊಂದಿಗೆ ಮಧ್ಯಾಹ್ನ ೧೨ಕ್ಕೆ ಮಹಾಮಂಗಳಾರತಿ ನಡೆದು ಪಾನಕಪನಿವಾರ ಸೇವೆ ನಡೆಯಲಿದೆ. ಇದೇ ದಿನ ಸಂಜೆ ೬ಕ್ಕೆ ಬೆಂಗಳೂರಿನ ನಟರಾಜ್ ಎಂಟರ್ ಟ್ರೈನರ್ಸ್ ತಂಡದವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದ್ದು ಹುಳಿಯಾರು ಹಾಗೂ ಸುತ್ತಮುತ್ತಲಿನ ಹಳ್ಳಿಯವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಟ್ರಸ್ಟ್ ನವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ