ಪ್ರಕೃತಿಯಲ್ಲಿ ಉತ್ತಮ ಆಹಾರ ಪದಾರ್ಥಗಳು ದೊರೆತರು ಸಹ ಸಾಕಷ್ಟು ಜನ ಬೇಕರಿಯಲ್ಲಿ ಮೈದಾ ಹಿಟ್ಟು ಬಳಸಿ ತಯಾರಿಸುವ ಬ್ರೆಡ್, ಬಿಸ್ಕೇಟ್ ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಸೇವಿಸಲು ಮುಗಿಬೀಳುತ್ತಿದ್ದು ತಮ್ಮ ದೇಹಾರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಮೈಸೂರಿನ ಕೃಷಿ ವಿಜ್ಞಾನಿ ಡಾ.ಖಾದರ್ ಎಚ್ಚರಿಸಿದರು.
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ವತಿಯಿಂದ ಅಯೋಜಿಸಿದ ಕಾರ್ಯಕ್ರಮದಲ್ಲಿ ಡಾ.ಖಾದರ್ ಮಾತನಾಡಿದರು. |
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ವತಿಯಿಂದ ಸೋಮವಾರ ಅಯೋಜಿಸಿದ್ದ "ಆರೋಗ್ಯಕ್ಕಾಗಿ ಆಹಾರ-ಆಹಾರಕ್ಕಾಗಿ ಕೃಷಿ " ವಿಚಾರಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೈದಾ ಹಿಟ್ಟಿನಿಂದ ತಯಾರಿಸುವ ತಿನಿಸುಗಳು ಬಾಯಿಗೆ ಹಿತವಾಗಿರುತ್ತವೆ ಹೋರತು ದೇಹಕ್ಕೆ ಒಳಿತಲ್ಲ. ನಮ್ಮ ದೇಹದಲ್ಲಿ ಆ ತಿನಿಸುಗಳು ಸರಿಯಾಗಿ ಜೀರ್ಣವಾಗದೆ ನಮ್ಮ ದೇಹಕ್ಕೆ ಬೇಕಾದ ಉತ್ತಮ ಪೋಷಕಾಂಶಗಳನ್ನು ನೀಡುವುದಿಲ್ಲ. ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಸಹಕಾರಿಯಾಗುವಂತೆ ಸೊಪ್ಪು,ತರಕಾರಿ ಅಂಗಡಿಗಳು ಗ್ರಾಮದಲ್ಲಿ ಕಾಣಬರುವುದಿಲ್ಲವಾದರೂ ಸಹ ಬೇಕರಿಗಳು ಮಾತ್ರ ಇದ್ದೇ ಇರುತ್ತವೆ ಎಂದರು.
ನಾವು ನಿತ್ಯ ಅಹಾರದಲ್ಲಿ ಬಳಸುವ ಅಕ್ಕಿ ಹೆಚ್ಚು ಪಾಲಿಶ್ ಮಾಡುವುದರಿಂದ ಅದರ ಪೌಷ್ಟಿಕಾಂಶ ಇಲ್ಲದಂತಾಗಿ, ಪಾಲಿಶ್ ಅಕ್ಕಿಯನ್ನು ಹೆಚ್ಚು ಪ್ರಮಾಣದಲ್ಲಿ ಬಳಸುವುದರಿಂದ ಆರೋಗ್ಯವನ್ನು ಅನಾರೋಗ್ಯದತ್ತ ಕರೆದೊಯ್ಯುತ್ತಿದ್ದೇವೆ ಎಂದರು. ಸಿರಿಧಾನ್ಯಗಳಾದ ಸಜ್ಜೆ, ಹಾರಕ, ನವಣೆ ಸೇರಿದಂತೆ ಇನ್ನಿತರ ಬೆಳೆಗಳನ್ನು ಬಳಕೆ ಮಾಡುವಲ್ಲಿ ನಮ್ಮ ಜನ ಹಿಂದೇಟಾಕುತ್ತಿದ್ದಾರೆ ಇನ್ನಾದರೂ ಎಚ್ಚೆತ್ತು ದೇಹವನ್ನು ಆರೋಗ್ಯಯುತವಾಗಿಡಲು ಸಹಕಾರಿಯಾಗುವಂತ ಆಹಾರ ಉತ್ಪನ್ನಗಳನ್ನು ಬಳಸುವಂತೆ ತಿಳಿಸಿದರು.
ಆಹಾರ ವಸ್ತುಗಳ ಉತ್ಪಾದನೆಗೆ ಪೂರಕವಾಗಿ ವಿವಿಧ ವೈಜ್ಞಾನಿಕ ವಿಧಾನಗಳಿದ್ದು ಅವುಗಳನ್ನು ಸರಿಯಾಗಿ ಬಳಸುವ ಮೂಲಕ " ಆರೋಗ್ಯಕ್ಕಾಗಿ ಆಹಾರ-ಆಹಾರಕ್ಕಾಗಿ ಕೃಷಿ" ಎಂಬ ಚಿಂತನೆಯಲ್ಲಿ ಆಹಾರ ಉತ್ಪಾದನೆಯಲ್ಲಿ ತೊಡಗಿಕೊಳ್ಳಿ ಎಂದರು.
ಈವೇಳೆ ಪ್ರಾಂಶುಪಾಲ ಕೃಷ್ಣಮೂರ್ತಿ ಬಿಳಿಗೆರೆ, ಶ್ರೀಮತಿ ಉಷಾಖಾದರ್, ಚಿ.ನಾಹಳ್ಳಿ ಸೃಜನಾ ಮಹಿಳಾ ವೇದಿಕೆಯ ಇಂದಿರಮ್ಮ, ಮಧುಗಿರಿ ವಿಜ್ಞಾನ ಕೇಂದ್ರದ ರಾಮಕೃಷ್ಟಪ್ಪ, ಉಪನ್ಯಾಸಕರಾದ ಶಂಕರಲಿಂಗಯ್ಯ, ಸೈಯದ್ ಇಬ್ರಾಹಿಂ ,ಶ್ರೀನಿವಾಸಪ್ಪ , ದೈಹಿಕ ಶಿಕ್ಷಣ ನಿರ್ದೇಶಕ ಶಿವಯ್ಯ, ಗ್ರಂಥಪಾಲಕ ಲೊಕೇಶನಾಯ್ಕ ಸೇರಿದಂತೆ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ