ಪ್ರಸ್ತುತದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು ಸಮಾಜದಲ್ಲಿ ಮಹಿಳೆ ಶೋಷಣೆಗೊಳಗಾಗುತ್ತಿದ್ದಾಳೆ ಇಂತಹದನ್ನು ಮೆಟ್ಟಿನಿಂತು, ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕಾಗಿ ಮಹಿಳೆಯರು ಜಾಗೃತರಾಗುವ ಮೂಲಕ ಮುನ್ನಡೆಯಬೇಕೆಂದು ಮಂಡ್ಯದ ಮಹಿಳಾ ಮುನ್ನಡೆ ಸಂಘಟನೆಯ ಶ್ರೀಮತಿ ಮಲ್ಲಿಗೆ ಕರೆನೀಡಿದರು
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಂಡ್ಯದ ಮಹಿಳಾ ಮುನ್ನಡೆ ಸಂಘದ ಶ್ರೀಮತಿ ಮಲ್ಲಿಗೆ ಉಪನ್ಯಾಸ ನೀಡಿದರು. |
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೃಜನ ಮಹಿಳಾ ವೇದಿಕೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಹಿಳಾ ದೌರ್ಜನ್ಯ ಹಾಗೂ ಮಹಿಳೆಯ ಸ್ಥಾನ ಕುರಿತು ಉಪನ್ಯಾಸ ನೀಡಿದರು.
ಇತ್ತೀಚಿನ ದಿನಗಳಲ್ಲಿ ಮಹಿಳಾ ದಿನಾಚರಣೆಯನ್ನು ಕೆಲ ಪ್ರತಿಷ್ಠ ತ ಕಂಪನಿಗಳು, ಸಿನಿಮಾ ತಾರೆಯತು ಮೋಜಿಗಾಗಿ ಆಚರಿಸುತ್ತಿದ್ದು ಮಹಿಳಾ ದಿನಾಚರಣೆಯ ಮಹತ್ವಕ್ಕೆ ಧಕ್ಕೆ ತರುತ್ತಿದ್ದಾರೆ ಇಂತಹದ ವಿರುದ್ದ ಇಂದಿನ ಯುವಪೀಳಿಗೆ ದನಿಎತ್ತಬೇಕು ಎಂದರು. ಮಹಿಳಾ ಶಿಕ್ಷಣಕ್ಕಾಗಿ ಅನೇಕ ವರ್ಷ ಹೋರಾಟ ನಡೆಸಿದ ಸಾವಿತ್ರಿಬಾಯಿಪುಲೆ ಅವರ ಸಾಧನೆಯನ್ನು ಸ್ಮರಿಸುತ್ತಾ , ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ ಮಾಡಬಹುದಾಗಿದ್ದು, ಪ್ರತಿಯೊಬ್ಬ ಹೆಣ್ಣುಮಗುವನ್ನು ಶಿಕ್ಷಿತರನ್ನಾಗಿ ಮಾಡುವಂತೆ ತಿಳಿಸಿದರು.
ಮಹಿಳೆಯ ಸುರಕ್ಷತೆಯ ದೃಷ್ಠಿಯಿಂದ ಕಠಿಣ ಕಾನೂನಿದ್ದರೂ ಸಹ ಮಹಿಳೆ ಶೋಷಣೆಗೆ ಒಳಗಾಗುತ್ತಿರುವುದು ಗಂಭೀರ ಸಂಗತಿಯಾಗಿದೆ. ಇದಕ್ಕೆ ಕಾರಣವನ್ನು ಹುಡುಕುತ್ತಾ ಹೊರಟರೆ ಮಾನವರ ವಿಕೃತ ಮನೋಭಾವವೇ ಆಗಿದ್ದು , ಅಂತಹ ಮನೋಭಾವನೆಯನ್ನು ಬದಲಾಯಿಸಿ ಸಮಾಜದ ಪ್ರತಿಯೊಬ್ಬರಲ್ಲೂ ಸಮಾನರೂ, ಹೆಣ್ಣುಮಕ್ಕಳನ್ನು ಗೌರವಿಸಬೇಕು ಎಂಬ ವಿಶಾಲ ಮನೋಭಾವ ಮೂಡುವಂತೆ ಮಾಡಬೇಕು ಎಂದರು. ಇಂದಿನ ಅನೇಕ ಬಂಡವಾಳಶಾಹಿಗಳು ತಮ್ಮದೇ ಆದ ಕಂಪನಿಗಳನ್ನು ಹೊಂದಿದ್ದು ಯುವಪೀಳಿಗೆಯ ಹಾದಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಸೂಕ್ತ ನಿಲುವುಕೈಗೊಳ್ಳುವ ಮೂಲಕ ಯುವಪೀಳಿಗೆಯ ಬೆಳವಣಿಗೆಯ ಬಗ್ಗೆ ಕಾಳಜಿ ತೋರಿಸಬೇಕು ಎಂದರು.
ಈ ವೇಳೆ ಪ್ರಾಂಶುಪಾಲ ಕೃಷ್ಣಮೂರ್ತಿಬಿಳಿಗೆರೆ, ಮಧುಗಿರಿ ವಿಜ್ಞಾನ ಕೇಂದ್ರದ ಅಧ್ಯಕ್ಷ ರಾಮಕೃಷ್ಣಪ್ಪ, ಚಿ.ನಾ.ಹಳ್ಳಿ ಸೃಜನಾ ಮಹಿಳಾ ವೇದಿಕೆಯ ಅಧ್ಯಕ್ಷೆ ಇಂದಿರಮ್ಮ, ಜಯಲಕ್ಷ್ಮಿ,ಶಶಿಕಲಾ, ಉಪನ್ಯಾಸಕಿ ಡಾ.ದಿನಮಣಿ, ಮಹಿಳಾ ಮುನ್ನಡೆ ಸಂಘದ ಪೂರ್ಣಿಮಾ,ಹುಳಿಯಾರು-ಕೆಂಕೆರೆ ಪ್ರೌಢಶಾಲೆಯ ಉಪಪ್ರಾಂಶುಪಾಲೆ ಇಂದಿರಾ, ಉಪನ್ಯಾಸಕಿಯರಾದ ವಿನುತಾಶ್ರೀ,ವಿಜಿಯಮ್ಮ, ವಿನುತಾ.ಕೆ.ಎಂ, ಉಪನ್ಯಾಸಕರಾದ ಶಂಕರಲಿಂಗಯ್ಯ, ಅಶೋಕ್, ಹನುಂತಪ್ಪ, ಶಿವಯ್ಯ, ಚಂದ್ರಮೌಳಿ,ಕುಮಾರ್, ಗ್ರಂಥಪಾಲಕ ಲೋಕೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ