ತ್ರಿಕರಣ ಶುದ್ದಿಯಿಂದ ಮಾತ್ರವೇ ನಾವು ನಮ್ಮ ಬಾಳನ್ನು ಸಾರ್ಥಕ ಪಡಿಸಿಕೊಳ್ಳಬಹುದು ಎಂದು ಹುಳಿಯಾರಿನ ಕನಕದಾಸ ಶಾಲೆಯ ಶಿಕ್ಷಕ ಹೆಚ್.ಸಿ.ಜಗದೀಶ್ ನುಡಿದರು.
ಪಟ್ಟಣದ ವೀರಭದ್ರೇಶ್ವರಸ್ವಾಮಿ ದೇವಾಲಯದ ಅರ್ಚಕ ಮಲ್ಲಿಕಾರ್ಜುನಯ್ಯಅವರ ನಿವಾಸದಲ್ಲಿ ಹೋಬಳಿ ಕನ್ನಡಸಾಹಿತ್ಯ ಪರಿಷತ್ ವತಿಯಿಂದ ಅಯೋಜಿಸಿದ್ದ ಮನೆಮನೆಗಳಲ್ಲಿ ಪಾಕ್ಷಿಕ ಕನ್ನಡ ಕವಿಕಾವ್ಯ ಗೋಷ್ಠಿಕಾರ್ಯಕ್ರಮದಲ್ಲಿ "ಜೀವನ ಮೌಲ್ಯಗಳನ್ನು ಕುರಿತು ಅವರು ಉಪನ್ಯಾಸ ನೀಡಿದರು.
ಮಾನವ ಜನ್ಮ ದೊಡ್ಡದು,ಇದ ಹಾನಿ ಮಾಡ ಕೊಳ್ಳಬೇಡಿ ಹುಚ್ಚಪ್ಪಗಳಿರಾ ಎಂದು ದಾಸವಾಣಿಯನ್ನು ಉಲ್ಲೇಖಿಸುತ್ತಾ ಅದರ ಸಾರವನ್ನು ತಿಳಿಸಿದರು.
ಅಧ್ಯಕ್ಷತೆವಹಿಸಿದ್ದ ಕೆಂಕೆರೆಯ ನಿವೃತ್ತಶಿಕ್ಷಕ ಅಡವಪ್ಪ ಮಾತನಾಡಿ,ಶಿವಶರಣರು ಹಾಗೂ ದಾಸರು, ಸಾಧು ಸಂತರು ಮಾನವರು ತಮ್ಮ ಜೀವನವನ್ನು ಉತ್ತಮವಾಗಿ ಸಾಗಿಸಲು ಸೂಕ್ತ ಮಾರ್ಗದರ್ಶನವನ್ನು ನೀಡಿದ್ದಾರೆ.ಅದನ್ನು ನಾವು ನಮ್ಮ ಜೀವನದಲ್ಲಿ ಸಾಧ್ಯವಾದಷ್ಟುಮಟ್ಟಿಗೆ ಅನುಷ್ಠಾನಗೊಳಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಕಸಾಪದ ತ.ಶಿ.ಬಸಮೂರ್ತಿ ಉಪಸ್ಥಿತರಿದ್ದು ಐಶ್ವರ್ಯ ಮತು ತೇಜಸ್ವಿನಿ ಪ್ರಾರ್ಥಿಸಿ,ಅಭಿನಂದ್ ಸ್ವಾಗತಿಸಿ ,ಶಿಕ್ಷಕ ನಾರಾಯಣಪ್ಪ ನಿರೂಪಿಸಿ,ವಂದಿಸಿದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ