ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದೇವತೆ ಶ್ರೀಕಾಳಿಕಾಂಬದೇವಿ ಹಾಗೂ ಬೊಮ್ಮಸಂದ್ರದ ಶ್ರೀ ಬೊಮ್ಮಲಿಂಗೇಶ್ವರ ಸ್ವಾಮಿ ಕೈಲಾಸೋತ್ಸವ ಗುರುವಾರ ಸಂಜೆ ವಿವಿಧ ಕಲಾ ತಂಡಗಳೊಂದಿಗೆ ವೈಭವಯುತವಾಗಿ ಕೆಂಕೆರೆಯಲ್ಲಿ ನಡೆಯಿತು.
ಹುಳಿಯಾರು ಹೋಬಳಿ ಕೆಂಕೆರೆಯಲ್ಲಿ ಗ್ರಾಮದೇವತೆ ಶ್ರೀಕಾಳಿಕಾಂಬದೇವಿ ಹಾಗೂ ಬೊಮ್ಮಸಂದ್ರದ ಶ್ರೀ ಬೊಮ್ಮಲಿಂಗೇಶ್ವರ ಸ್ವಾಮಿ ಕೈಲಾಸೋತ್ಸವ ವೈಭವಯುತವಾಗಿ ಜರುಗಿತು. |
ಅರಸೀಕೆರೆ ತಾಲ್ಲೂಕಿನ ಬೊಮ್ಮಸಂದ್ರದ ಬೊಮ್ಮಲಿಂಗೇಶ್ವರ ಸ್ವಾಮಿಯನ್ನು ಕೆಂಕೆರೆ ಗ್ರಾಮದ ಒಕ್ಕಲಿನವರು ತಮ್ಮ ಮನೆಗಳಿಗೆ ಕರೆದುಕೊಂಡು ಬಂದು ಕಳೆದ ಮೂರ್ನಾಲ್ಕು ದಿನಗಳಿಂದ ಸ್ವಾಮಿಗೆ ರುದ್ರಾಭಿಷೇಕ,ಪಂಚಾಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ನಡೆಸಿದರು. ಗುರುವಾರ ಸಂಜೆ ಗ್ರಾಮದ ಚನ್ನಬಸವೇಶ್ವರ ಸ್ವಾಮಿ ದೇವಾಲಯದಿಂದ ಕಾಳಿಕಾಂಬದೇವಿ ಹಾಗೂ ಬೊಮ್ಮಲಿಂಗೇಶ್ವರಸ್ವಾಮಿಯನ್ನು ವಿದ್ಯುತ್ ದೀಪಾಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಗ್ರಾಮದ ರಾಜಬೀದಿಗಳಲ್ಲಿ ಉತ್ಸವ ನಡೆಸಲಾಯಿತು. ನಂದಿಧ್ವಜಕುಣಿತ, ನಾಯಿಗೆರೆಯ ಬಸವಶ್ರೀ ಮಹಿಳಾ ವೀರಗಾಸೆ ತಂಡ ಹಾಗೂ ವೀರಭದ್ರನ ಕುಣಿತ ಉತ್ಸವಕ್ಕೆ ಮೆರುಗು ತಂದಿತ್ತು. ಉತ್ಸವದಲ್ಲಿ ಕೆಂಕೆರೆ ಹಾಗೂ ಸುತ್ತಮುತ್ತಲ ಹಳ್ಳಿಯ ಭಕ್ತಾಧಿಗಳು ಪಾಲ್ಗೊಂಡಿದ್ದು ಅಲಂಕೃತ ಸ್ವಾಮಿಯ ದರ್ಶನ ಪಡೆದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ