ಹುಳಿಯಾರು ಹೋಬಳಿಯ ಯಳನಡು ಸಮೀಪದ ಭೂತಪ್ಪನಗುಡಿ ಬಳಿ ಬೆಸ್ಕಾಂನ ನಿರಂತರ ಜ್ಯೋತಿ ಕೂಲಿ ಕೆಲಸಕ್ಕೆ ಬಂದಿದ್ದ ಕೆಲಸಗಾರ ಕೆಲಸದಲ್ಲಿ ತೊಡಗಿಕೊಂಡಿದ್ದಾಗ ಸಾವನಪ್ಪಿರುವ ಘಟನೆ ಭಾನುವಾರದಂದು ಹುಳಿಯಾರು ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಪುಟ್ಟನಾಯಕ ಬಿನ್ ಹನುಮಂತನಾಯ್ಕ(೨೮) ಮೃತಪಟ್ಟ ವ್ಯಕ್ತಿಯಾಗಿದ್ದು, ಈತ ದಾವಣಗೆರೆ ಜಿಲ್ಲೆಯ ಆನಗೊಡು ಹೋಬಳಿಯ ಗುಡ್ಡದಹಟ್ಟಿ ತಾಂಡ್ಯಕ್ಕೆ ಸೇರಿದವನಾಗಿದ್ದು, ಬೆಸ್ಕಾಂಗೆ ಸಂಬಂಧಿಸಿದ ನಿರಂತರ ಜ್ಯೋತಿ ಕಾರ್ಯಕ್ಕೆ ಕೂಲಿ ಕಾರ್ಮಿಕನಾಗಿ ಕೆಲಸ ಮಾಡಲು ಬಂದಿದ್ದ ಎನ್ನಲಾಗಿದೆ. ಘಟನೆ ಸಂಭವಿಸಿದಾಗ ತೀವ್ರಾ ರಕ್ತಸ್ರಾವದಿಂದ ಕುಸಿದಿದ್ದ ಈತನನ್ನು ಚಿಕಿತ್ಸೆಗೆಂದು ಹುಳಿಯಾರು ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿದ್ದು ಮೃತನ ಪತ್ನಿ ರೇಣುಕಬಾಯಿ ಹುಳಿಯಾರು ಠಾಣೆಯಲ್ಲಿ ದೂರು ನೀಡಿದ್ದರ ಮೇರೆಗೆ. ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ