ಹುಳಿಯಾರು ಪಟ್ಟಣದ ಶ್ರೀ ಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ಬಸವ ಸಮಿತಿ ಹಾಗೂ ಮಲ್ಲೇಶ್ವರ ಸ್ವಾಮಿ ದೇವಾಲಯ ಸಮಿತಿವತಿಯಿಂದ ಯುಗಾದಿ ವರ್ಷ ತೊಡಕಿನ ಅಂಗವಾಗಿ ಪಾನಕವಿತರಣೆ ಮಾಡಲಾಯಿತು.
ಹುಳಿಯಾರಿನ ಶ್ರೀಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ಯುಗಾದಿ ವರ್ಷತೊಡಕಿನಂದು ಸಾರ್ವಜನಿಕರಿಗೆ ಪಾನಕ ವಿತರಿಸಲಾಯಿತು. |
ಬೆಳಿಗ್ಗೆ ಸ್ವಾಮಿಗೆ ಅಭಿಷೇಕ , ಅರ್ಚನೆ ಹಾಗೂ ಮಹಾಮಂಗಳಾರತಿ ನಡೆಸಲಾಯಿತು. ನಂತರ ದೇವಾಲಯಕ್ಕೆ ಆಗಮಿಸಿದ ಭಕ್ತಾಧಿಗಳಿಗೆ ಪಾನಕ ಪನಿವಾರ ವಿತರಿಸಲಾಯಿತು. ಈ ವೇಳೆ ದೇವಾಲಯ ಸಮಿತಿಯ ನಂಜುಂಡಯ್ಯ, ಪಟೇಲ್ ರಾಜ್ ಕುಮಾರ್,ಈಶ್ವರಪ್ಪ,ಮರುಳಪ್ಪ,ಷಡಕ್ಷರಿ ಸೇರಿದಂತೆ ಇತರರಿದ್ದರು.ಹೋಬಳಿಯ ಕೆಂಕೆರೆಯ ಹಳೆಮಠದಲ್ಲೂ ಸಹ ವರ್ಷ ತೊಡಕಿನಂದು ಸಾರ್ವಜನಿಕರಿಗೆ ಪಾನಕಪನಿವಾರ ವಿತರಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ