ಆರೋಗ್ಯಪೇಯ ನೀರಾವನ್ನು ಇಳಿಸುತ್ತಿದ್ದ ವ್ಯಕ್ತಿಯನ್ನು ಸಾರಾಯಿ ಮಾರಾಟ ಕೇಸಿನಡಿ ಬಂಧಿಸಿದ್ದು ಆತನ ಮೇಲೆ ಹಾಕಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಹೋಬಳಿಯ ರೈತಸಂಘ(ಪುಟ್ಟಣ್ಣಯ್ಯ ಬಣ)ದವವರು ಒತ್ತಾಯಿಸಿದರು.
ಈರಣ್ಣನ ಕೇಸು ವಜಾಗೊಳಿಸಲು ಒತ್ತಾಯಿಸಿ ರೈತಸಂಘದವರು ನಾಡಕಛೇರಿಯ ಉಪತಹಸೀಲ್ದಾರ್ ಸತ್ಯನಾರಾಯಣ ಅವರಿಗೆ ಮನವಿ ಪತ್ರ ಸಲ್ಲಿಸಿದರು. |
ತಾಲ್ಲೂಕು ರೈತಸಂಘದ ಹೊಸಹಳ್ಳಿ ಚಂದ್ರಪ್ಪ ಮಾತನಾಡಿ , ತೆಂಗಿನ ಮರದಿಂದ ತಯಾರಾಗುವ ನೀರಾ ಶುದ್ದ ಆರೋಗ್ಯಕರಪೇಯವಾಗಿದ್ದು ರೈತರು ಇದನ್ನು ಸ್ವಂತ ಬಳೆಕೆಗೆ ಮುಂದಾಗಿದ್ದೆ ಘೊರ ಅಪರಾಧವೆಂದು ಬಿಂಬಿಸಿ ವಾಹನ ಜಪ್ತಿಮಾಡಿ ಕೇಸು ದಾಖಲಿಸಿರುವುದು ಖಂಡನೀಯ. ಹಳ್ಳಿಹಳ್ಳಿಗಳಲ್ಲೂ ಆಕ್ರಮ ಮದ್ಯ ಮಾರಾಟದ ಬಗ್ಗೆ ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳದ ಅಬಕಾರಿ ಇಲಾಖೆ ಅಮಾಯಕ ರೈತರ ಮೇಲೆ ಸುಳ್ಳು ನೆಪವೊಡ್ಡಿ ದೂರು ದಾಖಲಿಸಿರುವುದು ಅಧಿಕಾರಿಗಳ ರೈತವಿರೋಧಿ ನೀತಿ ಎತ್ತಿತೋರಿಸುತ್ತಿದೆ. ರೈತರು ಸಿಡಿದೇಳುವ ಮುನ್ನವೇ ಸರ್ಕಾರ ಎಚ್ಚೆತ್ತು ರೈತ ಈರಣ್ಣನ ಮೇಲಿನ ಮೊಕದ್ದಮೆ ಹಾಗೂ ಜಪ್ತಿಮಾಡಿರುವ ವಾಹನವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಇದಕ್ಕೂ ಬಗ್ಗದಿದ್ದಲ್ಲಿ ಮುಖ್ಯಮಂತ್ರಿಗಳ ಮನೆಮುಂದೆ ಧರಣಿ ಕೂರುವುದಾಗಿ ಎಚ್ಚರಿಸಿದರು.
ಈ ಸಂಬಂಧ ನಾಡಕಛೇರಿಯ ಉಪತಹಸೀಲ್ದಾರ್ ಸತ್ಯನಾರಾಯಣ ಅವರಿಗೆ ಮನವಿ ಪತ್ರ ಸಲ್ಲಿಸಿದರು. ರೈತಸಂಘದ ಹನುಂತಣ್ಣ,ಜಯಣ್ಣ,ಅರುಣ್ ಕುಮಾರ್, ಮಹಿಳಾ ಘಟಕದ ಜಯಮ್ಮ,ಕಮಲಮ್ಮ, ಆಟೋ ಸಂಘದ ಅಧ್ಯಕ್ಷ ಗಂಗಾಧರ್, ಡಿ.ಎಸ್.ಎಸ್.ನ ಗಿರೀಶ್, ಜಯಕರ್ನಾಟಕ ಸಂಘದ ಅಧ್ಯಕ್ಷ ಮೋಹನ್ ಕುಮಾರ್ ರೈ ಸೇರಿದಂತೆ ಇನ್ನಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ