ಹುಳಿಯಾರು ಪಟ್ಟಣದ ಶಂಕರಪುರ ಬಡಾವಣೆಯಲ್ಲಿನ ಚರಂಡಿಗಳ ತುಂಬೆಲ್ಲಾ ಕಸ,ಕಡ್ಡಿ ಸೇರಿದಂತೆ ಇನ್ನಿತ ತ್ಯಾಜ್ಯವಸ್ತುಗಳು ತುಂಬಿಕೊಂಡು ನೀರು ಹರಿಯದೆ ದುರ್ನಾತ ಬೀರುತ್ತಿದ್ದು ಜನರು ಮೂಗು ಮುಚ್ಚಿಕೊಂಡು ಸಂಚರಿಸುವಂತ ದುಸ್ಥಿತಿ ನಿರ್ಮಾಣವಾಗಿದೆ. ಚರಂಡಿಗಳನ್ನು ಸ್ವಚ್ಚಗೊಳಿಸಿ ತಿಂಗಳುಗಳೇ ಕಳೆದಿದ್ದು ಬಡಾವಣೆಯಲ್ಲಿ ಹಂದಿಗಳ ಉಪಟಳ ಹೆಚ್ಚಾಗಿದ್ದು ಚರಂಡಿ ತುಂಬೆಲ್ಲಾ ಹಂದಿಗಳೇ ಕಂಡುಬರುತ್ತವೆ. ಅಲ್ಲದೆ ಮನೆಯ ಗೇಟನ್ನು ಹಾಕದಿದ್ದರೆ ಹಂದಿಗಳು ಮನೆ ಒಳಗೆ ಬರುತ್ತವೆ. ಮಕ್ಕಳುಮರಿ ಓಡಾಡುವುದಕ್ಕು ಹೆದರುವಂತಾಗಿದೆ ಎಂದು ಇಲ್ಲಿನ ಮಹಿಳೆಯರು ಪಂಚಾಯ್ತಿಯಲ್ಲಿಗೆ ಆಗಮಿಸಿ ಪಿಡಿಓ ಅವರನ್ನು ಪ್ರಶ್ನಿಸಿದರಲ್ಲದೆ ಖುದ್ದು ಪಿಡಿಓ ಅವರನ್ನೇ ಸ್ಥಳಕ್ಕೆ ಕರೆದುಕೊಂಡು ಹೋಗಿ ವಾಸ್ತವಾಂಶ ವೀಕ್ಷಿಸುವಂತೆ ಪಟ್ಟು ಹಿಡಿದರು.
ಹುಳಿಯಾರಿನ ಶಂಕರಪುರ ಬಡಾವಣೆಯಲ್ಲಿ ಹೂಳುತುಂಬಿಕೊಂಡಿರುವ ಚರಂಡಿಯನ್ನು ಪಿಡಿಓ ಗೆ ತೋರಿಸುತ್ತಿರುವ ನಿವಾಸಿಗಳು. |
ಪಿಡಿಓ ಹಾಗೂ ಅಧ್ಯಕ್ಷರನ್ನು ಶಂಕರಪುರ ಬಡಾವಣೆಗೆ ಕರೆದುಕೊಂಡು ಬಂದ ನಿವಾಸಿಗಳು ಹಂದಿಗಳಿಂದ ಉಂಟಾಗಿರುವ ಅನೈರ್ಮಲ್ಯ ತೋರಿಸಿದರಲ್ಲದೆ, ಚರಂಡಿಯಲ್ಲಿ ಹೂಳು ತುಂಬಿಕೊಂಡು ನೀರು ಹರಿಯದೆ ಅಲ್ಲೇ ನಿಂತು ಸೊಳ್ಳೆಗಳಿಗೆ ಆಶ್ರಯ ತಾಣವಾಗಿರುವುದನ್ನು ತೋರಿಸಿದರು. ಅಲ್ಲದೆ ಈ ಬಡಾವಣೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಹಂದಿಗಳಿದ್ದು ಮುಂಜಾನೆ ಸಮಯದಲ್ಲಿ ಸಾಲುಸಾಲಾಗಿ ಹಂದಿಗಳು ಮನೆ ಮುಂದೆ ಓಡಾಡುತ್ತವೆ. ಹಂದಿಗಳನ್ನು ಯಾವುದೇ ಕಾರಣಕ್ಕೂ ಬಿಡದೆ ಹಿಡಿಯುವಂತೆ ಹಾಗೂ ಚರಂಡಿಗಳನ್ನು ಸ್ವಚ್ಚಗೊಳಿಸುವಂತೆ ಮನವಿ ಮಾಡಿದರು.
ಇದನ್ನೆಲ್ಲಾ ಗಮನಿಸಿದ ಪಿಡಿಓ ಅಡವೀಶ್ ಕುಮಾರ್ ಈಗಾಗಲೇ ಹಂದಿ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿದೆ. ಪಟ್ಟಣದಲ್ಲಿನ ಎಲ್ಲಾ ಹಂದಿಗಳನ್ನು ಹಿಡಿಯುತ್ತೇವೆ ಹಾಗೂ ಶೀಘ್ರವೇ ಪೌರಕಾರ್ಮಿಕರನ್ನು ಕಳುಹಿಸಿ ಚರಂಡಿ ಸ್ವಚ್ಚಗೊಳಿಸುವುದಾಗಿ ತಿಳಿಸಿದರು. ಇದಕ್ಕೆ ಜಗ್ಗದ ನಿವಾಸಿಗಳು ಚರಂಡಿಗಳನ್ನು ಸ್ವಚ್ಚಗೊಳಿಸದೆ ಹೋದರೆ ಆಗುವ ಆನಾಹುತಕ್ಕೆ ಪಂಚಾಯ್ತಿಯವರೇ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ವೇಳೆ ಶಶಿಕಲಾ, ಪುಷ್ಪ, ಮೋಹನ್ , ಗ್ರಾ.ಪಂಸದಸ್ಯ ರಾಘವೇಂದ್ರ, ಪ್ರಸನ್ನಕುಮಾರ್, ಮೋಹನ್ ಕುಮಾರೈ, ಏಜೆಂಟ್ ಕುಮಾರ್ ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ