ಹುಳಿಯಾರು ಸಮೀಪದ ನಂದಿಹಳ್ಳಿ ಗ್ರಾಮದ ಕಲ್ಲಳ್ಳಿ ಜಯಣ್ಣ ಎಂಬುವವರ ಜಮೀನಿನಲ್ಲಿ ಹಾಕಿಕೊಂಡಿದ್ದ ಶೆಡ್ ಗೆ ಆಕಸ್ಮಿಕ ಬೆಂಕಿತಾಕಿದ ಪರಿಣಾಮ ೨ ಸೀಮೆ ಹಸುಗಳು ಸಜೀವವಾಗಿ ದಹನಗೊಂಡು ದವಸ ಧಾನ್ಯ ಹಾಗೂ ಮನೆ ಬಳಕೆಯ ಸಾಮಗ್ರಿಗಳು ಸಂಪೂರ್ಣವಾಗಿ ಭಸ್ಮವಾದ ಘಟನೆ ಸೋಮವಾರ ರಾತ್ರಿ ಜರುಗಿದೆ.
ದಂಪತಿಗಳು ಅನ್ಯಕಾರ್ಯದ ನಿಮಿತ್ತ ತೆರಳಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಗ್ರಾಮಸ್ಥರು ದವಸಧಾನ್ಯ,ಬಟ್ಟೆ ನೀಡಿ ನೆರವಿನ ಹಸ್ತಚಾಚಿದ್ದಾರೆ. ಸ್ಥಳಕ್ಕೆ ಪಿಎಸೈ ಪ್ರವೀಣ್ ಕುಮಾರ್,ಉಪತಹಸೀಲ್ದಾರ್ ಸತ್ಯನಾರಾಯಣ, ಗ್ರಾಮಲೆಖ್ಖಿಗ ಸುಬ್ಬರಾಯಪ್ಪ,ಪಶು ಇಲಾಖೆ ಸಹಾಯಕ ನಿರ್ದೇಶಕ ಶಶಿಕುಮಾರ್ ಭೇಟಿ ನೀಡಿದ್ದು ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ