ಮಹಾತ್ಮಗಾಂಧಿ ಉದ್ಯೋಗಖಾತ್ರಿ ಯೋಜನೆಯಡಿ ೨೦೧೩ನೇ ಸಾಲಿನಲ್ಲಿ ಕೈಗೊಂಡಿದ್ದ ದನದಕೊಟ್ಟಿಗೆ,ಶೌಚಾಲಯ ಕಾಮಗಾರಿಯ ಬಿಲ್ ಪಾವತಿಸುವಂತೆ ಹಾಗೂ ಬಸವೇಶ್ವರನಗರಕ್ಕೆ ಸೂಕ್ತ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಪ್ರಾರಂಭವಾದ ಅಹೋರಾತ್ರಿ ಧರಣಿ ಇಓ ಕೃಷ್ಣಮೂರ್ತಿಯವರ ಭರವಸೆಯೊಂದಿಗೆ ಅಂತ್ಯಗೊಂಡಿತು.
ನರೇಗಾ ಯೋಜನೆಯಡಿ ದನದಕೊಟ್ಟಿಗೆ ನಿರ್ಮಿಸಿ ಸೂಕ್ತದಾಖಲೆ ನೀಡಿ ವರ್ಷ ಕಳೆದರೂ ಸಹ ಇದುವರೆಗೂ ಬಿಲ್ ಪಾವತಿಯಾಗಿಲ್ಲ ಈ ಬಗ್ಗೆ ಪಿಡಿಓ ಅವರನ್ನು ಕೇಳಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ ಹಾಗೂ ಲಂಚಕ್ಕೆ ಒತ್ತಾಯಿಸುತ್ತಿದ್ದಾರೆ .ಬಸವೇಶ್ವರನಗರ ಬಡಾವಣೆಯಲ್ಲಿ ಸೂಕ್ತ ಚರಂಡಿವ್ಯವಸ್ಥೆಯಾಗಲಿ, ಕುಡಿಯುವ ನೀರಿನ ವ್ಯವಸ್ಥೆಯಾಗಲಿ, ಬೀದಿದೀಪದ ವ್ಯವಸ್ಥೆಯಾಗಲಿ ಇಲ್ಲದೆ ಜನ ಪರದಾಡುತ್ತಿದ್ದಾರೆ ಈ ಬಗ್ಗೆ ಎಷ್ಟೇಬಾರಿ ಪಂಚಾಯ್ತಿಯವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲ್ಲ.ಅಧಿಕಾರಿಗಳು ಸ್ಥಳಕ್ಕಾಮಿಸಿ ಸಮಸ್ಯೆ ಪರಿಹರಿಸಿ ಎಂದು ಪಟ್ಟುಹಿಡಿದು ಇಲ್ಲಿನ ನಿವಾಸಿಗಳು ಸೋಮವಾರದಿಂದ ಎರಡುದಿನಗಳಕಾಲ ಅಹೋರಾತ್ರಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಬಾರದೆ ಹೋದರೆ ಪ್ರತಿಭಟನೆ ಉಗ್ರರೂಪತಾಳುತ್ತದೆ ಎಂದು ಎಚ್ಚರಿಸಿದ ನಂತರ ಬುಧವಾರ ಮಧ್ಯಾಹ್ನ ಇಓ ಕೃಷ್ಣಮೂರ್ತಿ ಸ್ಥಳಕ್ಕಾಗಮಿಸಿ ಸಮಸ್ಯೆ ಅಲಿಸಿದರು.
ಸ್ಥಳಕ್ಕೆ ಬಂದ ಇಓ ಅವರೊಂದಿಗೆ ಕೆಲಸಮಯ ಮಾತಿನ ಚಕಮಕಿ ನಡೆಸಿ ತಮ್ಮ ಸಮಸ್ಯೆಗಳನ್ನು ಬಿಚ್ಚಿಟ್ಟರು. ಇದನ್ನೆಲ್ಲಾ ಕೇಳಿದ ಇಓ ಮಾತನಾಡಿ, ಖಾತ್ರಿಯೋಜನೆಯಡಿ ಕೆಲವೆಡೆ ಅವ್ಯವಹಾರವಾದ ಹಿನ್ನಲೆಯಲ್ಲಿ ಹಣ ಬಿಡುಗಡೆಗೆ ತಡವಾಗಿದೆ ಹೊರತು ಯಾರು ಸರಿಯಾಗಿ ಕಾಮಗಾರಿ ಮಾಡಿರುತ್ತಾರೋ ಅವರಿಗೆ ಈಗಾಗಲೇ ಹಣ ಸಂದಾಯವಾಗುತ್ತಿದೆ. ಅದರಂತೆಯೇ ಈ ಪಂಚಾಯ್ತಿ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳ ಬಿಲ್ಲನ್ನು ಸಹ ಪರಿಶೀಲಿಸಿ ಪಾವತಿ ಮಾಡುವುದಾಗಿ ತಿಳಿಸಿದರು. ಕಾಮಗಾರಿಗಳ ಬಿಲ್ ತಡವಾಗಲು ಪಿಡಿಓ ಅವರೇ ಕಾರಣ ಎಂದು ಕೇಳಿಬಂದ ಅರೋಪದ ಬಗ್ಗೆ ವಿಚಾರಿಸಿ ಸೂಕ್ತಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿ ಧರಣಿಯನ್ನು ಹಿಂಪಡೆಯುವಂತೆ ಮಾಡಿದರು. ಈ ವೇಳೆ ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ, ಗ್ರಾ.ಪಂ.ನ ಕೆಲ ಸದಸ್ಯರು, ಬಸವೇಶ್ವರನಗರ ನಿವಾಸಿಗಳು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ