ಮೂರು ರಾಜ್ಯಗಳಲ್ಲಿ ಸಂಚರಿಸಲಿರುವ ರಾಮನವಮಿ ರಥಯಾತ್ರೆ ಶನಿವಾರ ಪಟ್ಟಣದ ಮೂಲಕ ಹಾದು ಹೋಯಿತು. ಬೆಂಗಳೂರಿನ ರಾಮದಾಸ ಆಶ್ರಮದ ಶಕ್ತಿಶಾಂತಾನಂದ ಮಹರ್ಷಿ ಅವರ ನೇತೃತ್ವದಲ್ಲಿ ಈ ರಥಯಾತ್ರೆ ಅಯೋಜಿಸಲಾಗಿದ್ದು, ಶಿವಮೊಗ್ಗ, ಹೊಸದುರ್ಗ ಮೂಲಕ ಹುಳಿಯಾರಿಗೆ ಆಗಮಿಸಿದ ರಥ ಸಂಜೆ ತುಮಕೂರಿನ ಸಿದ್ದಗಂಗಾಮಠ ತಲುಪಲಿದೆ.
ಹುಳಿಯಾರಿಗೆ ರಾಮನವಮಿ ರಥಯಾತ್ರೆ ಶನಿವಾರ ಆಗಮಿಸಿದ ವೇಳೆ ಮಾಜಿಶಾಸಕ ಕೆ.ಎಸ್.ಕಿರಣ್ ಕುಮಾರ್ ನೇತೃತ್ವದಲ್ಲಿ ಬರಮಾಡಿಕೊಳ್ಳಲಾಯಿತು. |
ಮಾರ್ಚ್ ೯ ರಂದು ಸ್ವಚ್ಚ ಭಾರತದ ಉದ್ಘಾಟನೆ ಮೂಲಕ ಕೊಲ್ಲೂರಿನಿಂದ ಹೊರಟ ರಥ ಉಡುಪಿ, ಮಂಗಳೂರು,ಶೃಂಗೇರಿ , ಶಿವಮೊಗ್ಗ ಮೂಲಕ ಪಟ್ಟಣಕ್ಕೆ ಆಗಮಿಸಿದ್ದು ಚಿಕ್ಕಮಗಳೂರು, ಹಾಸನ, ಮೈಸೂರು , ರಾಮನಗರ , ನಾಮಕಲ್ ಮಾರ್ಗವಾಗಿ ಕನ್ಯಾಕುಮಾರಿ ತಲುಪಿ ಮಾರ್ಚ್ ೨೮ರಂದು ತಿರುವನಂತಪುರದಲ್ಲಿ ಕೊನೆಗೊಳ್ಳಲಿದೆ.
ರಥದೊಂದಿಗೆ ಆಗಮಿಸಿದ್ದ ಶ್ರೀ ಶಕ್ತಿಶಾಂತಾನಂದ ಮಹರ್ಷಿಗಳು ಈ ಬಗ್ಗೆ ಮಾತನಾಡಿ ಹಿಂದೂ ಸಮಾಜದಲ್ಲಿ ಧರ್ಮ ಜಾಗೃತಿ ಉಂಟುಮಾಡುವ ಉದ್ದೇಶದಿಂದ ರಥಯಾತ್ರೆ ಕೈಗೊಂಡಿದ್ದು ಈಗಾಗಲೇ ಉಡುಪಿ,ಮಂಗಳೂರು, ಶಿವಮೊಗ್ಗ,ತುಮಕೂರು ಜಿಲ್ಲೆಯಲ್ಲಿ ಸಂಚರಿಸಿ, ಬೆಲಗೂರಿನ ಬಿಂಧುಮಾಧವ ಸ್ವಾಮಿಗಳ ಸನ್ನಿದಾನ ಸಂದರ್ಶಿಸಿ ಪಟ್ಟಣಕ್ಕೆ ಆಗಮಿಸಿರುವುದಾಗಿ ತಿಳಿಸಿದರು. ಈ ಬಾರಿ ೨೫ನೇ ವರ್ಷದ ರಥಯಾತ್ರೆಯಾಗಿದ್ದು ದಕ್ಷಿಣ ಕರ್ನಾಟಕದ ಹತ್ತು ಜಿಲ್ಲೆಗಳಲ್ಲಿ ಸಂಚರಿಸಿ ಮಾರ್ಚ್ ೨೮ರ ರಾಮನವಮಿಯಂದು ಕನ್ಯಾಕುಮಾರಿ ಮಾರ್ಗವಾಗಿ ತಿರುವನಂತಪುರ ತಲುಪಲಿದೆ ಎಂದರು.
ಮಾಜಿಶಾಸಕ ಕೆ.ಎಸ್.ಕಿರಣ್ ಕುಮಾರ್, ತಾಲ್ಲೂಕ್ ಬಿಜೆಪಿ ಅಧ್ಯಕ್ಷ ಎಂ.ಎಂ.ಜಗದೀಶ್, ಆಂಜನೇಯಸ್ವಾಮಿ ದೇವಾಲಯದ ಧನಂಜಯ , ಗೋಪಾಲ್ ರಾವ್, ಗಂಗಾಧರಯ್ಯ, ಬಳ್ಳೆಕಟ್ಟೆರಾಮಣ್ಣ, ಎ.ಚನ್ನಬಸವಯ್ಯ, ರಂಗನಾಥ್ ಪ್ರಸಾದ್ , ಗಣೇಶ್ ಹಾಗೂ ಸಾರ್ವಜನಿಕರು ಈ ಸಮಯದಲ್ಲಿ ಹಾಜರಿದ್ದು ರಥವನ್ನು ಬರಮಾಡಿಕೊಂಡರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ