ಹುಳಿಯಾರು ಪಟ್ಟಣ ಸೇರಿದಂತೆ ಗ್ರಾ.ಪಂ. ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಇನ್ನು ಮುಂದೆ ಯಾರಾದರೂ ಕೊಳವೆ ಬಾವಿ ಕೊರೆಸಬೇಕೆಂದರೆ ಅದಕ್ಕೆ ಅಗತ್ಯ ದಾಖಲೆಗಳನ್ನು ಗ್ರಾ.ಪಂ ಗೆ ನೀಡಿ ಅನುಮತಿ ಪಡೆಯ ಬೇಕೆಂದು ಹುಳಿಯಾರು ಗ್ರಾ.ಪಂ. ಪಿಡಿಓ ಅಡವೀಶ್ ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
| ಪಿಡಿಓ ಅದವೀಶ್ ಕುಮಾರ್ . |
ಪಂಚಾಯ್ತಿ ವ್ಯಾಪ್ತಿಯಲ್ಲಿನ ಖಾಸಗಿ ಹಾಗೂ ಸರ್ಕಾರಿ ಜಮೀನಿನಲ್ಲಿ ಬೋರ್ ವೆಲ್ ಕೊರೆಸುವ ವೇಳೆ ಸಂಬಂಧಪಟ್ಟ ಜಾಗದ ಮಾಲೀಕರು ಗ್ರಾ.ಪಂಯಿಂದ ಅನುಮತಿ ಪಡೆದು ಕೊರೆಸತಕ್ಕದಾಗಿದ್ದು, ಒಂದು ವೇಳೆ ಗ್ರಾ.ಪಂ. ಅನುಮತಿ ಪಡೆಯದೇ ಕೊಳವೇಬಾವಿ ಕೊರೆಸಿದಲ್ಲಿ ಹಾಗೂ ಅದರಿಂದ ಆಗುವ ಅನಾಹುತಕ್ಕೆ ಆ ಜಾಗದ ಮಾಲೀಕರೆ ಹೊಣೆಯಾಗಿರುತ್ತಾರೆ. ಜೊತೆಗೆ ಅನುಮತಿಯಿಲ್ಲದ ಜಾಗದಲ್ಲಿ ಬೋರ್ ವೆಲ್ ಕೊರೆಯಲು ಮುಂದಾಗುವ ಬೋರ್ವೆಲ್ ಲಾರಿಗಳನ್ನು ಗ್ರಾ.ಪಂ.ವಶಕ್ಕೆ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ