ಜಾನುವಾರುಗಳಲ್ಲಿ ಕಂಡುಬರುವ ಕಾಲುಬಾಯಿ ರೋಗ ನಿಯಂತ್ರಣಕ್ಕಾಗಿ ಸರ್ಕಾರ ಲಸಿಕೆ ಹಾಕುವ ಕಾರ್ಯ ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ ಗಾಣಧಾಳು ಪಶು ಆಸ್ಪತ್ರೆಯ ಪಶುವೈದ್ಯೆ ನೇತ್ರಾವತಿ ಸೋಮವಾರ ರಾಸುಗಳಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದ್ದಾರೆ.
![]() |
| ಹುಳಿಯಾರು ಹೋಬಳಿ ಗಾಣಧಾಳು ಪಶು ಆಸ್ಪತ್ರೆಯಲ್ಲಿ ವೈದ್ಯೆ ನೇತ್ರಾವತಿ ರಾಸುಗಳಿಗೆ ಕಾಲುಬಾಯಿ ರೋಗದ ಲಸಿಕೆ ಹಾಕುತ್ತಿರುವುದು. |
ಗಾಣಧಾಳು ಗ್ರಾ.ಪಂ. ವ್ಯಾಪ್ತಿಯ ಸೋಮನಹಳ್ಳಿ,ಯಗಚಿಹಳ್ಳಿ,ಮೇಲನಹಳ್ಳಿ,ಗುರುವಾಪುರ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ರೈತರು ತಮ್ಮ ರಾಸುಗಳಿಗೆ ಈ ಲಸಿಕೆ ಹಾಕಿಸುವಂತೆ ತಿಳಿಸಿದ್ದಾರೆ. ಈ ಲಸಿಕೆ ಹಾಕುವುದರಿಂದ ರಾಸುಗಳಿಗೆ ಬರಬಹುದಾದ ಕಾಲುಬಾಯಿ ರೋಗವನ್ನು ತಡೆಗಟ್ಟಬಹುದಾಗಿದ್ದು ಮುಂದಿನ ಕೆಲವುದಿನಗಳ ಕಾಲ ಈ ಲಸಿಕೆ ಹಾಕುವ ಕಾರ್ಯ ನಡೆಯುತ್ತದೆ ಇದರ ಉಪಯೋಗವನ್ನು ಈ ಭಾಗದ ರೈತರು ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ