ಹುಳಿಯಾರು ಪಟ್ಟಣದ ವಾಸವಿ ಶಾಲೆಯ ವಿದ್ಯಾರ್ಥಿಗಳು ಚಿ.ನಾ.ಹಳ್ಳಿಯಲ್ಲಿ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗುವ ಮೂಲಕ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
| ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುವ ಹುಳಿಯಾರಿನ ವಾಸವಿ ಶಾಲಾ ಮಕ್ಕಳೊಂದಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಶಿಕ್ಷಕ ವೃಂದ. |
ಪ್ರೌಢಶಾಲಾ ವಿಭಾಗದ ಬಾಲಕಿಯರು ವಾಲಿಬಾಲ್,ಥ್ರೋಬಾಲ್,ಷಟಲ್ ಕಾಕ್, ಬ್ಯಾಡ್ಮಿಂಟನ್ ನಲ್ಲಿ ವಿಜೇತರಾದರೆ, ಬಾಲಕರು ಖೋಖೋ,ಥ್ರೋಬಾಲ್,ಷಟಲ್ ಕಾಕ್ ನಲ್ಲಿ ಪ್ರಥಮ ಸ್ಥಾನಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಹೆಚ್.ಪಿ.ಎಸ್. ವಿಭಾಗದಲ್ಲಿ 600 ಮೀ ಓಟದಲ್ಲಿ ಚಿರಂಜೀವಿ ಪ್ರಥಮ,200 ಮೀ ಓಟದಲ್ಲಿ ಸ್ವಾಮಿ ಪ್ರಥಮ, ರಿಲೇಯಲ್ಲಿ ಪ್ರಥಮ,ಉದ್ದ ಜಿಗಿತದಲ್ಲಿ ತನುಷಾ ಪ್ರಥಮ ಸ್ಥಾನಪಡೆದರೆ, 400 ಮೀ ಓಟದಲ್ಲಿ ಮಧುಶ್ರೀ ದ್ವಿತೀಯ, ಎತ್ತರ ಜಿಗಿತದಲ್ಲಿ ಸಹನ ದ್ವಿತೀಯ ಸ್ಥಾನಪಡೆದಿದ್ದಾರೆ.ಗುಂಪು ಆಟಗಳಲ್ಲಿ ಬಾಲಕರು ಖೋಖೋ ಹಾಗೂ ಥ್ರೋಬಾಲ್ , ಬಾಲಕಿಯರು ಷಟಲ್ ಕಾಕ್ ನಲ್ಲಿ ಪ್ರಥಮ ಸ್ಥಾನಗಳಿಸುವ ಮೂಲಕ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಾಸವಿ ಹೆಚ್.ಪಿ.ಎಸ್.ಶಾಲೆಯ ಬಾಲಕರು ತಿಪಟೂರು ತಾಲ್ಲೂಕಿನ ಕುಪ್ಪಾಳದಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದ ಖೋಖೋದಲ್ಲಿ ಪ್ರಥಮ ಸ್ಥಾನಗಳಿಸಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಗ್ರಾಮೀಣಬಾಗದ ಈ ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಟಿ.ಆರ್.ಲಕ್ಷ್ಮಿಕಾಂತ್ , ಕಾರ್ಯದರ್ಶಿ ರಾಮ್ ನಾಥ್, ನಿರ್ದೇಶಕಾರದ ಬಿ.ವಿ.ಶ್ರೀನಿವಾಸ್, ಮುಖ್ಯಶಿಕ್ಷಕರಾದ ಮಹೇಶ್,ರಮೇಶ್ ಸೇರಿದಂತೆ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ