ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಈಶ್ವರನ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀವಿನಾಯಕ ಮೂರ್ತಿಯ ವಿಸರ್ಜನಾ ಕಾರ್ಯ ವಿಜೃಂಭಣೆಯಿಂದ ನಡೆಯಿತು.
| ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಈಶ್ವರನಗುಡಿಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನೆ ಅಂಗವಾಗಿ ಮೆರವಣಿಗೆ ನಡೆಸಲಾಯಿತು. |
ಗಣೇಶ ಚತುರ್ಥಿಯಂದು ಯುವಕ ಸಂಘದಿಂದ ಇದೇ ಪ್ರಥಮ ಬಾರಿ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಿ ನಿತ್ಯ ವಿಶೇಷ ಪೂಜೆ, ಭಜನೆ ಸೇರಿದಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದ್ದರು. ವಿಸರ್ಜನೆಯ ಅಂಗವಾಗಿ ಭಾನುವಾರ ಬೆಳಿಗ್ಗೆ ಈಶ್ವರನಿಗೆ ಅಭಿಷೇಕ ಹಾಗೂ ಗಣೇಶ ಮೂರ್ತಿಗೆ ಬಿಲ್ವಾರ್ಚನೆ ಸೇರಿದಂತೆ ವಿವಿಧ ಪೂಜಾಕೈಂಕರ್ಯಗಳನ್ನು ನಡೆಸಿ, ಆಗಮಿಸಿದ್ದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ನಂತರ ಗಣಪತಿಯನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ನಾಸಿಕ್ ಡೋಲ್ ಹಾಗೂ ವೀರಗಾಸೆ ನೃತ್ಯದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಪಟಾಕಿ ಸಿಡಿಸುತ್ತಾ ವಾದ್ಯಕ್ಕೆ ಹೆಜ್ಜೆ ಹಾಕುತ್ತಾ ಮೆರವಣಿಗೆ ಮಾಡಿ ಬಳಿಕ ಸಮೀಪದ ದೊಡ್ಡಹಳ್ಳದ ಡ್ಯಾಂ ನಲ್ಲಿ ವಿಸರ್ಜಿಸಲಾಯಿತು.
ತಾ.ಪಂ. ಸದಸ್ಯ ನವೀನ್, ವರ್ತಕ ಸತೀಶ್, ಬಸವರಾಜ್, ನಿಂಗರಾಜ್, ವಕೀಲ ವಿಶ್ವನಾಥ್,ಮಂಜುನಾಥ್, ಯುವಕ ಸಂಘದ ಬಳ್ಳಿ ಚಂದ್ರು,ಉಮೇಶ್, ದೀಪಕ್, ಪೃಥ್ವಿ, ಸುನಿಲ್, ವಿನಯ್, ಸುಹಾಸ್, ಚಂದನ್, ಅಭಿಷೇಕ್, ಅನೂಪ್, ಸಚಿನ್,ಮಧು,ಅರುಣ್,ದರ್ಶನ್,ಅಕ್ಷಯ್,ಸಂಜು ಸೇರಿದಂತೆ ಭಜನಾ ಮಂಡಳಿಯ ಮಹಿಳೆಯರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ