ಹುಳಿಯಾರು ಹೋಬಳಿ ಛಾಯಾಚಿತ್ರ ಗ್ರಾಹಕರ ಸೇವಾ ಛಾರಿಟಬಲ್ ಟ್ರಸ್ಟ್ ವತಿಯಿಂದ 175 ನೇ ವರ್ಷದ ಛಾಯಾಚಿತ್ರಗ್ರಾಹಕರ ದಿನ ಹಾಗೂ ಗೌರಿ-ಗಣೇಶ ಹಬ್ಬದ ವಿಶೇಷವಾಗಿ ಪಟ್ಟಣದ ಗಣಪತಿ ದೇವಾಲಯದಲ್ಲಿ ಮಕ್ಕಳ ಭಾವಚಿತ್ರ ಸ್ಪರ್ಧೆಯನ್ನು ತಾ.11 ರ ಗುರುವಾರ ಹಮ್ಮಿಕೊಂಡಿದ್ದಾರೆ.
ಸ್ಪರ್ಧೆಯಲ್ಲಿ 1 -3 ವರ್ಷದ ಮಕ್ಕಳು ಹಾಗೂ 3 - 5 ವರ್ಷದ ಮಕ್ಕಳಿಗಾಗಿ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ ನಡೆಸಲಿದ್ದು, ಪ್ರತಿ ವಿಭಾಗದಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಿದೆ. ಅಲ್ಲದೆ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಂದು ಮಗುವಿಗು ನೆನಪಿನ ಕಾಣಿಕೆ ನೀಡುವುದಾಗಿ, ಸ್ಪರ್ಧೆಗೆ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ ಎಂದು ಸಂಘದ ಅಧ್ಯಕ್ಷ ರಾಜುಬಡಗಿ ಅವರು ತಿಳಿಸಿದ್ದಾರೆ.
ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮಕ್ಕಳ ವಿವರ, ಜನನ ಪ್ರಮಾಣ ಪತ್ರ ಹಾಗೂ 8 X 12 ಅಳತೆಯ ಇತ್ತೀಚಿನ ಒಂದು ಭಾವಚಿತ್ರವನ್ನು ತಾ.9 ರ ಮಂಗಳವಾರದೊಳಗಾಗಿ ಪಟ್ಟಣದ ಡಾ.ರಾಜ್ ಕುಮಾರ್ ರಸ್ತೆ ರಾಜರಾಜೇಶ್ವರಿ ಸ್ಟುಡಿಯೋ ಅಥವಾ ಅಂಬಿಕಾ ಸ್ಟುಡಿಯೋದಲ್ಲಿಗೆ ತಲುಪಿಸುವಂತೆ ಕೋರಲಾಗಿದೆ. ಹೆಚ್ಚಿನ ವಿವರಕ್ಕೆ ರಾಜುಬಡಗಿ (9141282298), ತಾಂಡವಾಚಾರ್ (9141601711), ಸುದರ್ಶನ್ (9141688755), ಚಂದ್ರಶೇಖರ್(9880564922), ದುರ್ಗರಾಜ್(9141654431) ಸಂಪರ್ಕಿಸಬಹುದಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ