ಹುಳಿಯಾರು ಪಟ್ಟಣದೆಲ್ಲೆಡೆ ನೂತನ ವರ್ಷದ ಸಂಭ್ರಮಾಚರಣೆ ಮೇರೆಮೀರಿತ್ತು. ಬುಧವಾರ ಸಂಜೆಯಿಂದಲೇ ಹಿರಿಯರು,ಕಿರಿಯರೆನ್ನದೆ ಎಲ್ಲಾ ವಯೋಮಾನದವರು ನೂತನ ವರ್ಷಾಚರಣೆಗೆ ಸಿದ್ದತೆ ಮಾಡಿಕೊಂಡು ತಡರಾತ್ರಿ ೧೨ ಗಂಟೆಗೆ ಸಂಗೀತಕ್ಕೆ ಹೆಜ್ಜೆ ಹಾಕುತ್ತಾ ಪಟಾಕಿಸಿಡಿಸಿ , ಕೇಕ್ ಕತ್ತರಿಸಿ ಪರಸ್ಪರ ಶುಭಾಷಯ ಹೇಳುತ್ತಾ ೨೦೧೫ ನೂತನ ವರ್ಷ ಸ್ವಾಗತಿಸಿದರು.
![]() |
| ಹುಳಿಯಾರಿನ ಶಾಲೆಯೊಂದರಲ್ಲಿ ಹೊಸವರ್ಷದ ಆಚರಣೆ ಅಂಗವಾಗಿ ಮಕ್ಕಳು ಹಾಡಿಗೆ ನೃತ್ಯ ಮಾಡುತ್ತಾ ಸಂಭ್ರಮಿಸಿದರು. |
ಸಂಘಸಂಸ್ಥೆಗಳಿಂದ ಎಂಪಿಎಸ್ ಶಾಲಾ ಆವರಣದಲ್ಲಿ , ದುರ್ಗಮ್ಮ ದೇವಾಲಯ ಆವರಣದಲ್ಲಿ , ಎಸ್.ಎಲ್.ಆರ್ ಬಂಕ್ ಬಳಿಕ ಒಳಾಂಗಣ ಕ್ರೀಡಾಂಗಣದಲ್ಲಿ ಬಾಲ್ ಬ್ಯಾಡ್ಮಿಂಟನ್,ವಾಲಿಬಾಲ್ ಅಯೋಜಿಸಲಾಗಿತ್ತು. ಹತ್ತಾರು ಮನೆಯವರು ಒಂದೆಡೆ ಸೇರಿ ಮಕ್ಕಳಿಗೆ,ಮಹಿಳೆಯರಿಗೆ ವಿವಿಧ ಆಟೋಟಗಳನ್ನು ನಡೆಸಿ ಬಗೆಬಗೆಯ ತಿಂಡಿ ತಿನಿಸುಗಳನ್ನು ಸವಿಯುತ್ತಾ ಸಂಭ್ರಮಿಸಿದರು.
ಪಟ್ಟಣದ ಶಾಲಾ-ಕಾಲೇಜುಗಳಲ್ಲೂ ಸಹ ಗುರುವಾರದಂದು ನೂತನ ವರ್ಷದ ಆಗಮನವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಕೆಲವೊಂದು ಶಾಲೆಯಲ್ಲಿ ಮಕ್ಕಳುಗಳೆ ಕೇಕ್,ಚಾಕಲೇಟ್ ಮುಂತಾದವನ್ನು ತಂದು ಪರಸ್ಪರರಿಗೆ ಹಂಚಿ ಶುಭಾಷಯ ತಿಳಿಸಿದರಲ್ಲದೆ ಸಾಂಸ್ಕೃತಿಕಕಾರ್ಯಕ್ರಮಗಳನ್ನು ನಡೆಸಿದ್ದು ಸಾಮಾನ್ಯವಾಗಿತ್ತು. ಹೊಸವರ್ಷಕ್ಕೆ ಬೇಕರಿಗಳಲ್ಲಿ ಭರ್ಜರಿ ವ್ಯಾಪಾರವಾಗಿ ಗುರುವಾರ ಮಧ್ಯಾಹ್ನಕ್ಕೆ ಕೇಕ್ ಸಿಗದ ಪರಿಸ್ಥಿತಿ ಉದ್ಭವವಾಗಿತ್ತು.ಗ್ರೀಟಿಂಗ್ ಅಂಗಡಿಗಳು ಶಾಲಾಮಕ್ಕಳಿಂದ ತುಂಬಿತುಳುಕುತ್ತಿದ್ದು ಎಲ್ಲೆಡೆ ಸಡಗರಸಂಭ್ರಮ ಮನೆಮಾಡಿತ್ತು. ಇದರೊಟ್ಟಿಗೆ ವೈಕುಂಠ ಏಕಾದಶಿಯೂ ಸೇರಿ ಎಲ್ಲೆಡೆ ಅಪಾರ ಜನಸ್ತೋಮ ಕಂಡುಬಂತು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ