ಹುಳಿಯಾರು ಪಟ್ಟಣದ ಶ್ರೀಬನಶಂಕರಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಬನಶಂಕರಿ ಅಮ್ಮನವರಿಗೆ ಮಾಡಿದ್ದ ವೆಂಕಟೇಶ್ವರಸ್ವಾಮಿ ಅಲಂಕಾರ ಆಕರ್ಷಕವಾಗಿತ್ತು.
![]() |
| ಹುಳಿಯಾರಿನ ಬನಶಂಕರಿದೇವಿಗೆ ವೈಕುಂಠ ಏಕಾದಶಿ ಅಂಗವಾಗಿ ಮಾಡಿದ್ದ ವೆಂಕಟೇಶ್ವರನ ಅಲಂಕಾರ ಭಕ್ತರ ಗಮನ ಸೆಳೆಯಿತು. |
ಗುರುವಾರ ಮುಂಜಾನೆ ಅರ್ಚಕ ಶ್ರೀಧರ್ ಅವರ ಪೌರೋಹಿದಲ್ಲಿ ಅಮ್ಮನವರಿಗೆ ಅಭಿಷೇಕ,ಅರ್ಚನೆ ಸೇರಿದ ವಿವಿಧ ಪೂಜೆಗಳನ್ನು ನಡೆಸಲಾಗಿತ್ತು. ಸಂಜೆ ಬನಶಂಕರಿ ಅಮ್ಮನವರನ್ನು ವೈಕುಂಠ ನಾರಾಯಣ ಸ್ವರೂಪಿ ಶ್ರೀಮನ್ ವೆಂಕಟೇಶ್ವರಸ್ವಾಮಿ ರೂಪದಲ್ಲಿ ಅಲಂಕರಿಸಿ ಮಹಾಮಂಗಳಾರತಿ ನಡೆಸಲಾಯಿತು. ಅಮ್ಮನವರಿಗೆ ಮಾಡಿದ್ದ ಅಲಂಕಾರ ನೋಡಲು ಅಪಾರ ಸಂಖ್ಯೆಯ ಭಕ್ತಾಧಿಗಳು ಸೆರಿದ್ದು,ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ