ಹುಳಿಯಾರು ಪಟ್ಟಣದ ಪುರಾಣ ಪ್ರಸಿದ್ಧ ಅನಂತಶಯನ ಶ್ರೀರಂಗನಾಥಸ್ವಾಮಿ ದೇವಾಲಯ ಸೇರಿದಂತೆ ವಿವಿಧ ದೇವಾಲಯದಲ್ಲಿ ಗುರುವಾರ ವೈಕುಂಠ ಏಕಾದಶಿ ಆಚರಣೆ ಶ್ರದ್ಧಾಭಕ್ತಿಯಿಂದ ನಡೆಯಿತು.
![]() |
| ಹುಳಿಯಾರಿನ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ನಡೆದ ಹೋಮ. |
ರಂಗನಾಥಸ್ವಾಮಿ ದೇವಾಲಯದಲ್ಲಿ ಮುಂಜಾನೆಯಿಂದಲೇ ಟಿ.ಆರ್.ರಂಗನಾಥ ಶೆಟ್ಟಿ ಸೇವಾರ್ಥದಲ್ಲಿ ಸ್ವಾಮಿಗೆ ಅಭಿಷೇಕ,ಅರ್ಚನೆ ,ಅರಿಶಿನ ಅಲಂಕಾರ ಸೇರಿದಂತೆ ವಿವಿಧ ಪೂಜಾಕೈಂಕರ್ಯಗಳನ್ನು ನಡೆಸಲಾಯಿತು. ಗ್ರಾಮದೇವತೆಗಳಾದ ಹುಳಿಯಾರಮ್ಮ, ದುರ್ಗಮ್ಮ ಹಾಗೂ ಶ್ರೀಆಂಜನೇಯಸ್ವಾಮಿ ಸಮ್ಮುಖದಲ್ಲಿ ಶ್ರೀರಾಮಚಂದ್ರಭಟ್ರು ಹಾಗೂ ಮಂಜು ಅವರ ಪೌರೋಹಿತ್ಯದಲ್ಲಿ ಗಣಪತಿ ಹೋಮ, ನವಗ್ರಹಹೋಮ, ಲಕ್ಷ್ಮಿರಂಗನಾಥಹೋಮ, ಮಹಾಲಕ್ಷ್ಮಿ-ಮಾಹಾವಿಷ್ಟು ಹೋಮ ನಡೆದು ಮಧ್ಯಾಹ್ನದ ವೇಳೆಗೆ ಪೂರ್ಣಾಹುತಿ ಸಮರ್ಪಿಸಿ ಮಹಾಮಂಗಳರತಿ ನಡೆಸಿದರು. ಸಂಜೆ ಸ್ವಾಮಿಯನ್ನು ವಿಶೇಷವಾಗಿ ಅಲಂಕರಿಸಿದಲ್ಲದೆ ಸಪ್ತದ್ವಾರದದ ಮೂಲಕ ಸ್ವಾಮಿಯ ದರ್ಶನ ನಡೆಯಿತು. ಭಕ್ತಾಧಿಗಳಿಗಾಗಿ ಲಾಡು,ಗೊಜ್ಜವಲಕ್ಕಿ ವ್ಯವಸ್ಥೆ ಮಾಡಿದ್ದರು.
ಈ ವೇಳೆ ವೈಕುಂಠ ಏಕಾದಶಿ ಸೇವಾಸಮಿತಿಯ ಅಧ್ಯಕ್ಷ ಧನುಷ್ ರಂಗನಾಥ್, ಉಪಾಧ್ಯಕ್ಷ ವಿಶ್ವನಾಥ್,ಕಾರ್ಯದರ್ಶಿ ಕುಮಾರ್, ವಿಪ್ರಸಂಘದ ಹು.ಕೃ.ವಿಶ್ವನಾಥ್,ದಯಾನಂದ್, ಅರ್ಚಕರಾದ ಪದ್ಮರಾಜು, ಶೇಷಾದ್ರಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಪಾಲ್ಗೊಂಡಿದ್ದು ಸ್ವಾಮಿಯ ದರ್ಶನ ಪಡೆದರು.
ಪಟ್ಟಣದ ವಾಸವಿ ದೇವಾಲಯದಲ್ಲಿ ಆರ್ಯವೈಶ್ಯಮಂಡಳಿಯವರಿಂದ, ಬನಶಂಕರಿ ದೇವಾಲಯದಲ್ಲಿ ದೇವಾಂಗ ಮಂಡಳಿಯವರಿಂದ, ಕಾಳಿಕಾಂಭ ದೇವಾಲಯದಲ್ಲಿ ವಿಶ್ವಕರ್ಮ ಸಮುದಾಯದವರಿಂದ ಹಾಗೂ ಹುಳಿಯಾರಮ್ಮ,ದುರ್ಗಮ್ಮ ದೇವಾಲಯಗಳಲ್ಲೂ ಸಹ ಪೂಜಾಕೈಂಕರ್ಯಗಳು ನಡೆದವು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ