ಹುಳಿಯಾರು ಪಟ್ಟಣದ ವಾಸವಿ ದೇವಾಲಯದಲ್ಲಿನ ವೈಕುಂಠ ಏಕಾದಶಿ ಅಂಗವಾಗಿ ಗುರುವಾರ ಸಂಜೆ ಆರ್ಯವೈಶ್ಯ ಮಂಡಳಿವತಿಯಿಂದ ಶ್ರೀರಾಮಚಂದ್ರಸ್ವಾಮಿ ಹಾಗೂ ಕನ್ನಿಕಾಪರಮೇಶ್ವರಿ ದೇವಿಗೆ ವಿಶೇಷ ಪೂಜೆ ,ಅಲಂಕಾರ ನಡೆಸಲಾಯಿತು.
![]() |
| ಹುಳಿಯಾರಿನ ವಾಸವಿ ದೇವಾಲಯದಲ್ಲಿ ವೈಕುಂಠಏಕಾದಶಿ ಅಂಗವಾಗಿ ಕನ್ನಿಕಾಪರಮೇಶ್ವರಿಯ ಉತ್ಸವ ನಡೆಯಿತು |
ಗುರುವಾರ ಬೆಳಿಗ್ಗೆ ಅರ್ಚಕ ರಾಮಚಂದ್ರ ಭಟ್ರ ಪೌರೋಹಿತ್ಯದಲ್ಲಿ ಶ್ರೀರಾಮಚಂದ್ರಸ್ವಾಮಿಗೆ ಸುಪ್ರಭಾತಸೇವೆ, ಅರ್ಚನೆ,ಅಭಿಷೇಕ ಸೇರಿದಂತೆ ವಿವಿಧ ಪೂಜೆಗಳನ್ನು ನಡೆಸಿ ನಂತರ ಬಗೆಬಗೆ ಹೂಗಳಿಂದ ವಿಶೇಷವಾಗಿ ಅಲಂಕರಿಸಿದ್ದರಲ್ಲದೆ ಕನ್ನಿಕಾಪರಮೇಶ್ವರಿ ಅಮ್ಮನವರನ್ನು ವಿಶೇಷ ಅಲಂಕಾರ ಮಾಡಿದ್ದರು. ಸಂಜೆ ಪ್ರಾಕಾರೋತ್ಸವ ,ಅಷ್ಟಾವಧಾನ ಸೇವೆ ಮಹಾಮಂಗಳಾರತಿಯ ನಂತರ ಅಲಂಕೃತ ಸ್ವಾಮಿ ಹಾಗೂ ಅಮ್ಮನವರ ದರ್ಶನ ಪಡೆದರು. ಆಗಮಿಸಿದ್ದ ಭಕ್ತಾಧಿಗಳಿಗಾಗಿ ಪ್ರಸಾದ ವ್ಯವಸ್ಥೆ ಮಾಡಿದ್ದರು. ಈ ವೇಳೆ ದೇವಾಲಯ ಸಮಿಯವರು ಸೇರಿದಂತೆ ಆರ್ಯವೈಶ್ಯ ಸಮುದಾಯವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ